ಲ್ಹೋ ಖಾಂಡೊ ಸಂಗ್ ಫೊ ಗುಹೆಗಳು ಸಲ್ಫರ್ಯುಕ್ತ ಬಿಸಿನೀರಿನ ಬುಗ್ಗೆಗಳ ಸಮೀಪದಲ್ಲಿವೆ. 8ನೇ ಶತಮಾನದಲ್ಲಿ ಗುರು ರಿನ್ಪೋಚೆ ಧ್ಯಾನ ಮಾಡುತ್ತಿದ್ದ ನಾಲ್ಕು ಗುಹೆಗಳಲ್ಲಿ ಇದು ಕೂಡ ಒಂದು. ಚ್ಯಾಂಗ್ ಲ್ಹರಿ ನಗ್ನಿಫು, ಶಾರ್ಚೊ ಫೆಫೂ ಮತ್ತು ನಬ್ ದೆಚೆನ್ಫೂ ಇವು ಉಳಿದ ಮೂರು ಗುಹೆಗಳು.
ಈ ಗುಹೆಗಳನ್ನು ಪ್ರಮುಖವಾದ ಬೌದ್ಧ ಯಾತ್ರಾ ಸ್ಥಳಗಳೆಂದು ಪರಿಗಣಿಸಲಾಗುತ್ತದೆ. ಪಶ್ಚಿಮ ಬಂಗಾಳ, ನೇಪಾಳ ಮತ್ತು ಭೂತಾನ್ ಗಳಿಂದ ಇಲ್ಲಿಗೆ ಭಕ್ತಾದಿಗಳು ಈ ಗುಹೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಇಲ್ಲಿನ ಪವಿತ್ರ ಫು ಚಾ ಚು ಬಿಸಿ ನೀರಿನ ಬುಗ್ಗೆಯಲ್ಲಿ ಸ್ನಾನ ಮಾಡುತ್ತಾರೆ.


Click it and Unblock the Notifications