ಗಡ್ವಾಲ್ ರೈಫಲ್ಸ್ ರೆಜಿಮೆಂಟಲ್ ಯುದ್ಧ ಸ್ಮಾರಕನ್ ಲಾನ್ಸ್ ಡೌನ್ ನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದೆಂದು ಪರಿಗಣಿಸಲಾಗಿದೆ. ಈ ವಸ್ತುಸಂಗ್ರಹಾಲಯವನ್ನು ಅಂದಿನ ಭಾರತದ ಮುಖ್ಯ ಕಮಾಂಡರ್ ಆಗಿದ್ದ ಟ್ರೆಂಟ್ ನ ಲಾರ್ಡ್ ರಾವ್ಲಿನ್ಸನ್ ಅವರು, 11 ನವೆಂಬರ್, 1923 ರಲ್ಲಿ ಸ್ಥಾಪಿಸಿದರು. ಇದು ಲಾನ್ಸ್ ಡೌನ್ ನ ಪೆರೇಡ್ ಮೈದಾನದಲ್ಲಿದೆ. ಪ್ರವಾಸಿಗರು ಈ ವಸ್ತು ಸಂಗ್ರಹಾಲಯದಲ್ಲಿ ಭೇಟಿ ನೀಡಿ ಭಾರತೀಯ ಸೇನೆಯ ಇತಿಹಾಸದ ಕುರಿತು ಹೆಚ್ಚು ವಿಷಯವನ್ನು ತಿಳಿಯಬಹುದಾಗಿದೆ.


Click it and Unblock the Notifications