Search
  • Follow NativePlanet
Share
ಮುಖಪುಟ » ಸ್ಥಳಗಳು » ಲಕ್ಷದ್ವೀಪ » ಆಕರ್ಷಣೆಗಳು » ಕಲ್ಪೇನಿ ದ್ವೀಪ

ಕಲ್ಪೇನಿ ದ್ವೀಪ, ಲಕ್ಷದ್ವೀಪ

4

ದೇಶದ ಪ್ರಮುಖ ಭೂಮಿಯ ಭಾಗವಾಗಿರುವ ಕೊಚ್ಚಿಯಿಂದ ಈ ಕಲ್ಪೇನಿ ದ್ವೀಪ 150 ಮೈಲಿ ದೂರದಲ್ಲಿದೆ. ಇದರ ವ್ಯಾಪ್ತಿ ತುಂಬಾ ಕಿರಿದು, ಕೇವಲ 2.8 ಚದರ್‌ ಕಿ.ಮೀ. ನಷ್ಟಿದೆ. ಉತ್ತರ-ದಕ್ಷಿಣ ಭಾಗದಲ್ಲಿ ಚಾಚಿರುವ ಈ ಸರೋವರ ಪ್ರದೇಶ ಅತ್ಯಂತ ಆಕರ್ಷಕವಾಗಿದೆ.

ಕಲ್ಪೇನಿ ದ್ವೀಪ ಅತ್ಯಂತ ಜನಪ್ರಿಯವಾಗಿರುವುದು ಟಿಪ್‌ ಕಡಲತೀರದಿಂದಾಗಿ. ಬಿಳಿ ಮರಳಿನಿಂದ ಆವೃತ್ತವಾಗಿರುವ ಈ ಸ್ಥಳ ಹಸಿರು ಬಣ್ಣದ ಸರೋವರವನ್ನು ಹೊಂದಿದೆ. ಡೈವಿಂಗ್‌ಗೆ ಹೇಳಿ ಮಾಡಿಸಿದ ತಾಣ. ಕಡಲಿನಾಳಕ್ಕೆ ತೆರಳಿ ಅಲ್ಲಿನ ಜಲಚರಗಳನ್ನು ವೀಕ್ಷಿಸಲು ಇದು ಒಳ್ಳೆಯ ಸ್ಥಳ. ಈ ದ್ವೀಪದ ಉತ್ತರ ಭಾಗದ ಕೊನೆಯಲ್ಲಿ ಈ ಕಡಲತೀರವಿದೆ. ಸಮುದ್ರದಲ್ಲಿ ಬೋಟ್‌ ಮೂಲಕ ಸುತ್ತಾಡುವುದು, ನೀರಿನಾಳದಲ್ಲಿ ನಡೆದಾಡುವ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಇಲ್ಲಿದೆ. ಅಲ್ಲದೇ ಇದು ಇಲ್ಲಿ ಅತ್ಯಂತ ಜನಪ್ರಿಯ ಕೂಡ. ತಿಲಕ್ಕಮ್‌, ಪಿಟ್ಟಿ, ಚೆರಿಯಾಮ್‌ ದ್ವೀಪಗಳು ಕಲ್ಪೇನಿ ದ್ವೀಪದ ಸಮೂಹ ದ್ವೀಪಗಳು. ಕಲ್ಪೇನಿಯಲ್ಲಿ 37 ಮೀಟರ್‌ ಎತ್ತರವಾದ ಲೈಟ್‌ಹೌಸ್‌ ಇದೆ. ಇದರ ತುತ್ತತುದಿಯಲ್ಲಿ ನಿಂತು ಕಲ್ಪೇನಿಯ ಸುತ್ತಲಿನ ರಮಣೀಯ ನೋಟ ಸವಿಯಬಹುದು. ಇದರ ಸಮೂಹ ದ್ವೀಪವನ್ನು ಕಾಣಬಹುದು ಹಾಗೂ ಉತ್ತಮ ಛಾಯಾಗ್ರಹಣಕ್ಕೆ ಇದು ಸೂಕ್ತವಾಗಿ ಲಭಿಸುತ್ತದೆ.

ಇಲ್ಲಿ ಬಾಡಿಗೆ ಆಧಾರದ ಮೇಲೆ ಕಾಟೇಜ್‌ಗಳು ಸಿಗುತ್ತವೆ. ಅಲ್ಲದೇ ಇಬ್ಬರು ಹಂಚಿಕೊಳ್ಳುವ ಮಾದರಿಯಲ್ಲಿ ದೊರೆಯುತ್ತವೆ. ಈ ದ್ವೀಪಕ್ಕೆ ಆಗಮಿಸಿದರೆ ಕೊಚ್ಚಿ ಬಂದರಿಗೆ ನೇರವಾಗಿ ತೆರಳುವ ಸಂಪರ್ಕ ವ್ಯವಸ್ಥೆ ಇಲ್ಲಿದೆ. ಸಮುದ್ರ ಮಾರ್ಗದಲ್ಲಿ ತೆರಳಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City