ದಿಗಂಬರ ಜೈನ ಬಾರಾ ದೇವಸ್ಥಾನವು ಹೆಚ್ಚು ಜನಪ್ರಿಯತೆ ಗಳಿಸಿದ ಸ್ಥಳ. ಪ್ರವಾಸಿಗರು ಇಲ್ಲಿ, ಅಪುರೂಪದ ಪ್ರತಿಮೆಗಳು, ಪುರಾತನ ಕಲಾಕೃತಿಗಳು ಮತ್ತು ಜೈನ ಬರಹಗಳ ಸಂಗ್ರಹಗಳನ್ನು ಹೊತ್ತ ಕಲಾ ಗ್ಯಾಲರಿಯನ್ನೂ ಸಹ ನೋಡಬಹುದಾಗಿದೆ. ಕೊರೆದ ಖಂಬಗಳು ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ದ್ವಾರಗಳು, ಈ ದೇಗುಲದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ದೇವಸ್ಥಾನದ ದ್ವಾರದ ಮೇಲಿರುವ ಶಾಸನವೊಂದರ ಪ್ರಕಾರ, ಇದನ್ನು ಆಶಾಡ ಶುಕ್ಲ 8, 1136 ರಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಎರಡು ವೇದಿಕಾ ಕೋಣೆಗಳಿದ್ದು, ಎರಡನೆ ತೀರ್ಥಂಕರರಾದ ಅಜೀತನಾಥಜಿ ಮತ್ತು ಹದಿನಾರನೇ ತೀರ್ಥಂಕರರಾದ ಶಾಂತಿನಾಥಜಿಯವರ ವಿಗ್ರಹಗಳನ್ನು ಕಾಣಬಹುದಾಗಿದೆ.ಈ ದೇವಸ್ಥಾನವು, ತನ್ನಲ್ಲಿರುವ 166 ಮಾರ್ಬಲ್ ನಿಂದ ಮಾಡಲಾಗಿರುವ ಜೈನ ತೀರ್ಥಂಕರರ ಪ್ರತಿಮೆಗಳಿಂದ ಬಹು ಜನಪ್ರಿಯವಾಗಿದೆ. ಇವುಗಳಲ್ಲದೆ ಪ್ರವಾಸಿಗರು, ಲೋಹಗಳಿಂದ ರಚಿಸಲ್ಪಟ್ಟ ಇತರೆ ವಿಗ್ರಹಗಳನ್ನೂ ಕೂಡ ಇಲ್ಲಿ ನೋಡಬಹುದು.


Click it and Unblock the Notifications