ಈ ಗುರುದ್ವಾರವು ಶ್ರೀ ಗುರು ಅಮರ್ ದಾಸ್‍ರವರಿಗೆ ಸಂಬಂಧಪಟ್ಟ ಗುರುದ್ವಾರವಾಗಿದೆ. ಇಲ್ಲಿಗೆ ಅವರು ಸೂರ್ಯಗ್ರಹಣದ ದಿನ ತಮ್ಮ ಕುಟುಂಬ ಸದಸ್ಯರ ಜೊತೆಗೆ ಭೇಟಿ ನೀಡಿದ್ದರಂತೆ. ಆಗಿನ ಕಾಲದಲ್ಲಿ ಹಿಂದೂಗಳು ತಮ್ಮ ಧಾರ್ಮಿಕ ಸ್ಥಳಗಳಿಗೆ ತೀರ್ಥ ಯಾತ್ರೆ ಹೋಗಬೇಕಾದರೆ ಸುಂಕವನ್ನು ತೆರಬೇಕಾಗುತ್ತಿತ್ತು. ಆದರೆ ಈ ಗುರುಗಳು ಸುಂಕವನ್ನು ಪಾವತಿಸಲು ನಿರಾಕರಿಸಿದರು. ಆದರೂ ಸಹ ಚಕ್ರವರ್ತಿಯು ಇವರ ಯಾತ್ರೆಗೆ ಅನುವು ಮಾಡಿಕೊಟ್ಟನು. ಇಲ್ಲಿ ವರ್ಷಪೂರ್ತಿ ಸಿಖ್ ಭಾಂದವರು ಹಬ್ಬ ಹರಿದಿನಗಳನ್ನು ಆಚರಿಸುತ್ತಿರುತ್ತಾರೆ. ಅದರಲ್ಲಿಯು ಗುರುಪುರಬ್ ಅಥವಾ ಸಿಖ್ ಗುರುಗಳ ಜನ್ಮದಿನವನ್ನು ಇಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.


Click it and Unblock the Notifications