ಕರ್ನೂಲಿನ ಶಿರಡಿ ಸಾಯಿ ಬಾಬಾ ದೇವಸ್ಥಾನ 70 ವರ್ಷಗಳ ಹಿಂದೆ ಕಟ್ಟಿಸಲಾಗಿದ್ದು, ಭಿನ್ನವಾದ ಸ್ಥಳವಾಗಿದೆ. ಇದೊಂದು ಅತ್ಯಂತ ದೊಡ್ಡ ಸಾಯಿ ಬಾಬಾ ಮಂದಿರವಾಗಿದ್ದು ಸುಮಾರು 1.5 ಎಕರೆ ವಿಸ್ತಾರದಲ್ಲಿ ಹಬ್ಬಿಕೊಂಡಿದೆ. ತುಂಗಭದ್ರ ದಂಡೆಯ ಮೇಲೆ ಈ ಮಂದಿರವನ್ನು ಕಟ್ಟಿದ್ದು ಒಬ್ಬ ಬಟ್ಟೆ ತೊಳೆಯುವ ಮನುಷ್ಯ. ಇದರ ಆಕಾರ ನಕ್ಷತ್ರದಂತಿದ್ದು ಪ್ರತಿ ಮುಂಜಾನೆ ಮತ್ತು ಸಂಜೆ ಬಾಬಾರಿಗೆ ಆರತಿ, ಪ್ರಾರ್ಥನೆ ನಡೆಯುತ್ತದೆ. ಆರತಿಯ ಪೂಜೆಗೆ ದೂರ ದೂರದ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನದ ಒಳಭಾಗದಲ್ಲಿ ದೇವತೆ ಲಕ್ಷ್ಮಿ ಮತ್ತು ಹನುಮಂತನ ಮೂರ್ತಿಯೂ ಇವೆ.
ದೇವಸ್ಥಾನದ ವಾತಾವರಣ ತಂಪು ಮತ್ತು ಪ್ರಶಾಂತವಾಗಿದೆ. ನದಿ ತೀರದಿಂದ ಹಾದು ಬರುವ ತಂಗಾಳಿ ಹಿತಕರವಾಗಿದ್ದು ಮುಂಜಾನೆ ಮತ್ತು ಸಂಜೆಯ ಪ್ರಾರ್ಥನೆಯ ಹೊತ್ತಿಗೆ ದೇವಸ್ಥಾನಕ್ಕೆ ಭೇಟಿ ನೀಡುವುದು ಉತ್ತಮ. ಸುಮಾರು 800 ಮಂದಿ ಕುಳಿತುಕೊಳ್ಳಲು ಸಾಧ್ಯವಿರುವ ಧ್ಯಾನದ ಹಾಲ್ ನಲ್ಲಿ ಯಾರು ಬೇಕಾದರೂ ಧ್ಯಾನಸ್ಥರಾಗಬಹುದು. ಕೊಂಡ ರೆಡ್ಡಿ ಬುರುಜಿಗೆ ಅತ್ಯಂತ ಹತ್ತಿರದಲ್ಲಿರುವದರಿಂದ ಇಲ್ಲಿಗೆ ಆರಾಮಾಗಿ ತಲುಪಬಹುದು.


Click it and Unblock the Notifications