ಅಘನಾಶಿನಿ ನದೀಪಾತ್ರದಲ್ಲಿರುವ ಮಿರ್ಜಾನ ಕೋಟೆಯನ್ನು ನೋಡಲು ಪ್ರವಾಸಿಗರಿಗೆ ಸಲಹೆ ಮಾಡಬಹುದು. ಈ ಕೋಟೆ ಸುಮಾರು 4.1 ಹೆಕ್ಟೇರು ವೈಶಾಲ್ಯತೆ ಹೊಂದಿದೆ. ತನ್ನ ಸುಂದರವಾದ ವಾಸ್ತುಶಿಲ್ಪಕ್ಕೆ ಈ ಕೋಟೆ ಹೆಸರಾಗಿದ್ದು, ಎರಡು ಹಂತದ ಗೋಡೆಯನ್ನು ಹೊಂದಿದೆ. ಕೆಂಪುಕಲ್ಲಿನಿಂದ ಮಾಡಿದ ಗೋಡೆಗಳು ಅತೀ ಎತ್ತರವಾಗಿದ್ದು, ಬುರುಜುಗಳನ್ನು ಹೊಂದಿದೆ. ಮಿರ್ಜಾನ ಕೋಟೆಯು ಒಂದು ಕಾಲದಲ್ಲಿ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿತ್ತು ಮತ್ತು ಹಲವು ಕಥೆಗಳು ಈ ಕೋಟೆಗೆ ಸಂಬಂಧಿಸಿದಂತೆ ಹೆಣೆದುಕೊಂಡಿವೆ.
ಕೋಟೆಗೆ ಒಂದು ಮುಖ್ಯವಾದ ಮತ್ತು ಇನ್ನು ಮೂರು ಹೆಚ್ಚಿನ ದ್ವಾರವಿದೆ. ಕೋಟೆಯ ಒಳಗೆ ಅಂತರಸಂಪರ್ಕವನ್ನು ಹೊಂದಿರುವ ಬಾವಿಳಿವೆ. ಕೋಟೆಯ ಇಡೀ ರಚನೆಯನ್ನು ಈ ಬಾವಿಗಳು ಸುತ್ತುವರಿದಿವೆ.ಐತಿಹ್ಯಗಳ ಪ್ರಕಾರ 16ನೇ ಶತಮಾನದಲ್ಲಿ ಗೇರಸೊಪ್ಪೆಯ ರಾಣಿ ಚೆನ್ನಭೈರದೇವಿಯು ಈ ಕೋಟೆಯನ್ನು ಕಟ್ಟಿದಳು ಮತ್ತು ಸುಮಾರು 54 ವರ್ಷಗಳ ಕಾಲ ಈ ಕೋಟೆಯಲ್ಲೇ ವಾಸಿಸಿದ್ದಳು. ಸದ್ಯದಲ್ಲಿ ಈ ಕೋಟೆ ಹಾಳುಬಿದ್ದ ಸ್ಥಿತಿಯಲ್ಲಿದೆ, ಆದರೂ ಕೂಡಾ ಭಾರತೀಯ ವಾಸ್ತುಶಿಲ್ಪ ಇಲಾಖೆಯು ಈ ಕೋಟೆಯನ್ನು ಮತ್ತೆ ಹಳೆಯ ವೈಭವಕ್ಕೆ ಮರಳಿಸುವ, ಪ್ರವೇಶದ್ವಾರ, ದರ್ಬಾರ‍್ ಹಾಲ್, ಗುಪ್ತ ಸುರಂಗಗಳು ಮತ್ತು ಮಾರುಕಟ್ಟೆಯ ಪ್ರದೇಶವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿದೆ.
ಸುತ್ತಲಿನ ಪ್ರದೇಶದಲ್ಲಿ ದಟ್ಟವಾದ ಅರಣ್ಯವಿದ್ದು, ಹಿಂದೂ ದೇವರುಗಳು ಮತ್ತು ದೇವತೆಗಳನ್ನು ಇಲ್ಲಿನ ಕಲ್ಲುಗಳ ಮೇಲೆ ಕಾಣಬಹುದು. ಈ ಕೋಟೆಯಲ್ಲಿ ಕೆಲವು ಅತಿ ಪುರಾತನ ವಸ್ತುಗಳು ಕೂಡಾ ಇದ್ದು, 1652ರ ಚಿನ್ನ ನಾಣ್ಯ, ಸುಮಾರು 50 ಕಬ್ಬಿಣದ ಗುಂಡುಗಳು, ರಾಜವಂಶದ ಸರ್ಪಮಾಲಿಕೆ ನಾಣ್ಯಗಳು ಮತ್ತು ಭೂ ಕುಡಿಕೆಗಳು ಹಾಗೂ ಇನ್ನಿತರ ಹಲವು ವಸ್ತುಗಳನ್ನು ನಾವು ನೋಡಬಹುದು.


Click it and Unblock the Notifications