'ಮೋಡಗಳ ಅರಮನೆ' ಎಂದೂ ಕೂಡ ಕರೆಯಲಾಗುವ ಈ ಬಾದಲ್ ಮಹಲ್, ಕುಂಭಲ್ಗಡ್ ಕೋಟೆಯ ಮೇಲೆ ನೆಲೆಸಿದೆ. ಮರ್ದಾನಾ ಮಹಲ್ ಮತ್ತು ಜನಾನಾ ಮಹಲ್ ಈ ಅರಮನೆಗೆ ಕೂಡಿಕೊಂಡ ಎರಡು ಒಳಭಾಗಗಳು. ಇಲ್ಲಿನ ಭವ್ಯವಾದ ಕೊಠಡಿಗಳು ನೀಲಿ ಬಣ್ಣದ ಭಿತ್ತಿಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದು 19ನೇ ಶತಮಾನದ ಕಾಲವನ್ನು ಪ್ರತಿನಿಧಿಸುವಂತಿದೆ. ಟುರ್ಕಾಯ್ಸ್, ಹಸಿರು ಮತ್ತು ಬಿಳಿ ಬಣ್ಣಗಳು ಕೊಠಡಿಗಳಲ್ಲಿ ಪ್ರಮುಖವಾಗಿ ಆವರಿಸಿವೆ.ಪ್ರವಾಸಿಗರು, ಜನಾನಾ ಮಹಲ್ ನಲ್ಲಿ ಕಲ್ಲಿನ ಜಾಲಿಗಳನ್ನು ಕಾಣಬಹುದಾಗಿದೆ; ಅಂದಿನ ರಾಣಿಯರು ಈ ಜಾಲಿಗಳ ಮೂಲಕ ಅರಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕಲಾಪಗಳನ್ನು ವಿಕ್ಷೀಸುತ್ತಿದ್ದರು. ಕೋಣೆಗಳು ತಮ್ಮ ಅನನ್ಯವಾದ ಹವಾನಿಯಂತ್ರಣ ವ್ಯವಸ್ಥೆಯಿಂದ ಕೂಡಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಈ ವ್ಯವಸ್ಥೆಯಲ್ಲಿ ಡಕ್ಟ್ ಪೈಪುಗಳನ್ನು ಸಾಲಾಗಿ ಜೋಡಿಸಲಾಗಿದ್ದು, ಅವು ತಂಪು ಗಾಳಿಯನ್ನು ಒಳ ಪ್ರವೇಶಿಸಲು ಎಡೆ ಮಾಡುತ್ತವೆ.


Click it and Unblock the Notifications