Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ತಿರುನಕ್ಕರ ಮಹಾದೇವ ದೇವಾಲಯ

ತಿರುನಕ್ಕರ ಮಹಾದೇವ ದೇವಾಲಯ, ಕುಮರಕೊಮ್

1

ತಿರುನಕ್ಕರ ಮಹಾದೇವ ದೇವಾಲಯವು ಕೊಟ್ಟಾಯಂನಿಂದ 2ಕಿ.ಮೀ ದೂರದಲ್ಲಿದ್ದು, ಕುಮರಕೊಮಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.  ಈ ದೇವಾಲಯದ ಇತಿಹಾಸವು ನಮ್ಮನ್ನು 16ನೇ ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ನಂಬಿಕೆಗಳ ಪ್ರಕಾರ ಈ ದೇವಾಲಯವನ್ನು ತೆಕ್ಕುಂಕೂರಿನ ರಾಜ ನಿರ್ಮಿಸಿದನು ಎಂದು ಭಾವಿಸಲಾಗುತ್ತದೆ. ಈ ದೇವಾಲಯವು ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದಾಗಿ ಸಹಸ್ರಾರು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿರುತ್ತದೆ.

ಈ ದೇವಾಲಯದ ಮುಖ್ಯದೇವರು ಶಿವ. ಭಕ್ತಾಧಿಗಳು ಹಬ್ಬ ಹರಿದಿನಗಳಂದು ಇಲ್ಲಿನ ಸ್ವಾಮಿಯ ಆಶೀರ್ವಾದವನ್ನು ಪಡೆಯಲು ಆಗಮಿಸುತ್ತಿರುತ್ತಾರೆ. ಪ್ರತಿವರ್ಷ ಹತ್ತುದಿನಗಳ ಕಾಲ ವೈಭವೋಪೇತವಾಗಿ  ಜರುಗುವ ಫಾಲ್ಗುಣ ಉತ್ಸವಂ ಇಲ್ಲಿನ ಪ್ರಸ್ತಿದ್ದ ಉತ್ಸವವಾಗಿದೆ. ಕಥಕ್ಕಳಿ ಮತ್ತು ವೇಲಕಳಿಯಂತಹ ಜನಪದ ನೃತ್ಯ ಪ್ರಕಾರಗಳನ್ನುಈ ಹಬ್ಬದ ಸಂದರ್ಭದಲ್ಲಿ ನಡೆಸಿಕೊಡುತ್ತಾರೆ. ಈ ನೃತ್ಯಗಳು ನೋಡುಗರಿಗೆ ನಿಜವಾದ ದೃಶ್ಯವೈಭವವನ್ನೊದಗಿಸುತ್ತವೆ.ಈ ದೇವಾಲಯವು  ಕೇರಳದ ಸಾಂಪ್ರದಾಯಿಕ ವಾಸ್ತುಶಿಲ್ಪ ಶೈಲಿಯ ಹೊರತಾಗಿ ತನ್ನಲ್ಲಿರುವ ಭಿತ್ತಿಚಿತ್ರಕಲೆಯ ಸಲುವಾಗಿ ಸಹ ಕಲಾಸಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ದೇವಾಲಯ ಸಂಕೀರ್ಣವು ಕೂಥಂಬಲಂ (ರಂಗಸ್ಥಳ) ಮತ್ತು ಗಣಪತಿಯ ಸಣ್ಣ ಮೂರ್ತಿಗಳನ್ನು ಒಳಗೊಂಡಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu