Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಕುಮರಕೊಮ್ ಬೀಚ್

ಕುಮರಕೊಮ್ ಬೀಚ್, ಕುಮರಕೊಮ್

1

ಕುಮರಕೊಮ್ ಬೀಚ್ ಕೇರಳದ ಅತ್ಯಂತ ಮನಮೋಹಕ ಬೀಚುಗಳಲ್ಲಿ ಒಂದಾಗಿದ್ದು, ತನ್ನ ಅಬ್ಬರವಿಲ್ಲದ ವಾತಾವರಣದಿಂದಾಗಿ ವಿರಾಮಕಾಲವನ್ನು ಕಳೆಯಲು ಹೇಳಿ ಮಾಡಿಸಿದ ತಾಣವಾಗಿದೆ. ಈ ಬೀಚಿನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಮರಳ ದಂಡೆಗಳು ಪ್ರವಾಸಿಗರಿಗೆ ವಿರಾಮ ಕಾಲವನ್ನು ಕಳೆಯುತ್ತ, ಆನಂದಿಸಲು ಅನುಕೂಲವನ್ನು ಮಾಡಿಕೊಡುತ್ತದೆ. ವಾಣಿಜ್ಯ ಚಟುವಟಿಕೆಗಳ ಗಡಿಬಿಡಿಯಿಂದ ದೂರವಿರುವ ಈ ಬೀಚು ಕರಾವಳಿಯ ಪ್ರಶಾಂತವಾದ ಪರಿಸರದಲ್ಲಿ ನೆಲೆಸಿದೆ.

ಈಜು, ವಾಲಿಬಾಲ್, ಫ್ರಿಸ್ ಬೀ, ವಾಟರ್ ಸ್ಕಿಯಿಂಗ್, ಪ್ಯಾರ ಸೇಯಿಲಿಂಗ್, ವಿಂಡ್ ಸರ್ಫಿಂಗ್ ಮತ್ತು ವಾಟರ್ ಏರೋಬಿಕ್ಸ್ ನಂತಹ ಕಡಲಕಿನಾರೆಯ ಚಟುವಟಿಕೆಗಳನ್ನು ಕೈಗೊಳ್ಳಲು ಇಲ್ಲಿ ಅನುಕೂಲಗಳಿವೆ. ನಗರದ ಗೌಜು ಗದ್ದಲಗಳಿಂದ ಒಂದೆರಡು ದಿನ ದೂರವಿದ್ದು, ಪ್ರಶಾಂತವಾಗಿ ಕಾಲ ಕಳೆಯಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಇಲ್ಲಿ ಪುಸ್ತಕ ಓದುತ್ತ, ಕಡಲ ನೀರನ್ನು ವೀಕ್ಷಿಸುತ್ತ, ಸೂರ್ಯಾಸ್ತಮಾನವನ್ನು ವೀಕ್ಷಿಸುತ್ತ ಮತ್ತು ಸೂರ್ಯಸ್ನಾನವನ್ನು ಮಾಡುತ್ತ ಕಾಲಕಳೆಯಬಹುದು.

ಈ ಬೀಚಿಗೆ ಸನಿಹದಲ್ಲಿ ಹಲವಾರು ರೆಸಾರ್ಟ್ ಮತ್ತು ಹೋಮ್ ಸ್ಟೇಗಳು ದೊರೆಯುತ್ತವೆ. ರೆಸಾರ್ಟುಗಳಲ್ಲಿ ಸ್ಪಾ ಚಿಕಿತ್ಸೆ ಮತ್ತು ಆಯುರ್ವೇದಿಕ್ ಮಸಾಜ್ ಸೌಲಭ್ಯಗಳು ದೊರೆಯುತ್ತವೆ. ಪ್ರವಾಸಿಗರು ತಮ್ಮ ದೈನಂದಿನ ಜಂಜಡಗಳನ್ನು ಮರೆತು ಮೈ ಮನಗಳನ್ನು ಹಗುರಗೊಳಿಸಿಕೊಳ್ಳಲು ಈ ಮರಳ ದಂಡೆಗಳಿಗೆ ಭೇಟಿಕೊಡುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue