ಹನೊಗಿ ಮಾತಾ ದೇವಾಲಯವು ಕುಲ್ಲುವಿನ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದೆ. ಇದು ಮಂಡಿ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಹಿಂದು ದೇವತೆಯಾದ ಹಂಗೊ ಮಾತಾಗೆ ಸಮರ್ಪಿಸಲಾಗಿದೆ. ಈ ದೇವಿಯ ದರ್ಶನ ಪಡೆಯಲು ಭಕ್ತಾಧಿಗಳು ವರ್ಷಪೂರ್ತಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ದೇವಾಲಯವು ಒಂದು ಸಣ್ಣ ಬೆಟ್ಟದ ತುದಿಯಲ್ಲಿದ್ದು, ಸುತ್ತಲು ಸುಂದರವಾದ ಬೆಟ್ಟಗುಡ್ಡಗಳಿಂದ ಸುತ್ತುವರೆದಿದೆ. ಇದು ನೋಡುವ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುತ್ತವೆ.