ಸಮಯ ಸಿಕ್ಕಲ್ಲಿ ಧರ್ಮಸ್ಥಳ ಪ್ರವಾಸಿಗರು ಹನುಮಾನ್ ಗುಂಡಿ ಜಲಪಾತಕ್ಕೆ ಭೇಟಿ ನೀಡಬಹುದು ಮತ್ತು ಈ ಜಲಪಾತವು ಸುಮಾರು 100 ಅಡಿ ಎತ್ತರದಿಂದ ಧುಮುಕುತ್ತದೆ. ಹನುಮಾನ್ ಗುಂಡಿ ಜಲಪಾತವು ಸುತನಬ್ಬೆ ಜಲಪಾತ ಎಂದೂ ಕೂಡಾ ಕರೆಯಲ್ಪಟ್ಟಿದೆ. ಇದು ಕುದುರೆಮುಖ ನ್ಯಾಷನಲ್ ಪಾರ್ಕ್‌ನ ಬೆಟ್ಟದಲ್ಲಿ ಇದೆ. ಚಾರಣ ಮಾಡುವವರಿಗೆ ಇದು ಸೂಕ್ತ ತಾಣ. ಅಕ್ಟೋಬರಿನಿಂದ ಮೇ ಅವಧಿಯು ಚಾರಣ ಮಾಡುವವರಿಗೆ ಸೂಕ್ತವಾದ ಕಾಲ.ಹನುಮಾನ್ ಗುಂಡಿ ಜಲಪಾತವು ಕಾರ್ಕಳ ಮತ್ತು ಲಕ್ಯಾ ಡ್ಯಾಮ್‌ನ ಮಧ್ಯೆ ಇದೆ. ಪ್ರಶಾಂತವಾದ ವಾತಾವರಣದಲ್ಲಿ ಕಾಲ ಕಳೆಯವುದಕ್ಕೆ ಇದು ಉತ್ತಮಮ ಪ್ರದೇಶವಾಗಿದೆ. ಜಲಪಾತದ ಕೆಳಗೆ ಸುರಕ್ಷಿತವಾಗಿ ಇಳಿಯುವ ಆಸಕ್ತಿಯಿದ್ದ ಪ್ರವಾಸಿಗರು 30 ರೂಪಾಯಿಯನ್ನು ನೀಡಬೇಕಾಗುತ್ತದೆ. ಹನುಮಾನ್ ಗುಂಡಿ ಜಲಪಾತದ ಕೆಳಗೆ ಇಳಿಯುವುದಕ್ಕೆ ಅರಣ್ಯ ಇಲಾಖೆಯು ಸುರಕ್ಷತಾ ಮೆಟ್ಟಿಲುಗಳನ್ನು ನಿರ್ಮಿಸಿದೆ.


Click it and Unblock the Notifications