Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಆಕರ್ಷಣೆಗಳು » ರಾಜಾಜಿ ಸ್ಮಾರಕ

ರಾಜಾಜಿ ಸ್ಮಾರಕ, ಕೃಷ್ಣಗಿರಿ

1

ತೋರಪಲ್ಲಿಯ ರಾಜಾಜಿ ಸ್ಮಾರಕವು ಚಕ್ರವರ್ತಿ ರಾಜಗೋಪಾಲಚಾರಿಯವರ ಮನೆಯಾಗಿತ್ತು. ಇಲ್ಲಿ ರಾಜಾಜಿಯವರು ಹುಟ್ಟಿದಾಗಿನಿಂದ 11 ವರ್ಷದವರೆಗೆ ಇದ್ದರು (10 ಡಿಸೆಂಬರ್ 1878 – 25 ಡಿಸೆಂಬರ್ 1972) . ಸಿ. ರಾಜಗೋಪಾಲಚಾರಿ ಅಥವಾ ರಾಜಾಜಿಯವರು ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ಧೀಮಂತ ನಾಯಕರಾಗಿದ್ದವರು.

ಇವರು ಕೇವಲ ತಮಿಳು ನಾಡಿನ ಮುಖ್ಯಮಂತ್ರಿಯಷ್ಟೇ ಅಲ್ಲದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ನಾಯಕ, ಭಾರತದ ಗೃಹ ಮಂತ್ರಿ, ಪಶ್ಚಿಮ ಬಂಗಾಳದ ರಾಜ್ಯಪಾಲ, ಮದ್ರಾಸ್ ಪ್ರಾಂತ್ಯದ ಪ್ರೀಮಿಯರ್ ಆಗಿದ್ದರು. ಅಲ್ಲದೆ ಇವರು ಭಾರತದ ಪ್ರಥಮ ವೈಸ್‍ರಾಯ್ ಮತ್ತುಕೊನೆಯ ಗವರ್ನರ್ ಜನರಲ್ ಆಗಿದ್ದರು. ಇವರನ್ನು ಪ್ರೀತಿಯಿಂದ " ಸೇಲಂನ ಮಾವಿನಹಣ್ಣು" ಎಂದು ಕರೆಯುತ್ತಿದ್ದರು.

ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಇವರು ತಾವು ಕರ್ತವ್ಯ ನಿರ್ವಹಿಸಿದ ಪ್ರತಿಯೊಂದು ಪದವಿಗು  ಸಹ ಘನತೆಯನ್ನು ತಂದುಕೊಟ್ಟವರು ಎಂದರೆ ತಪ್ಪಾಗಲಾರದು. ಇವರ ಜೀವನದಿಂದ ನಾವು ಇಂದಿಗು ಕಲಿಯಬೇಕಾದ ಮೌಲ್ಯಗಳು ದೊರೆಯುತ್ತವೆ. ಇವರ ಸ್ಮಾರಕದಲ್ಲಿ ಇವರಿಗೆ ಸೇರಿದ ಕೆಲವು ವಸ್ತುಗಳನ್ನು, ಛಾಯಚಿತ್ರಗಳನ್ನು ಜೋಪಾನವಾಗಿ ಕಾಪಾಡಲಾಗಿದೆ. ಈ ಸ್ಮಾರಕವು ರಾಜಾಜಿಯವರ ಧೀಮಂತ ವ್ಯಕ್ತಿತ್ವವನ್ನು, ಸಿದ್ಧಾಂತವನ್ನು ಅಮರವಾಗಿಸಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed