Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಆಕರ್ಷಣೆಗಳು » ಮಲ್ಲಚಂದ್ರನ್

ಮಲ್ಲಚಂದ್ರನ್, ಕೃಷ್ಣಗಿರಿ

1

ಮಲ್ಲಚಂದ್ರನ್ ಎಂಬುದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ವಿಭಾಗದವರಿಂದ ನಿರ್ವಹಿಸಲ್ಪಟ್ಟುತ್ತಿರುವ ಒಂದು ತಾಣವಾಗಿದೆ. ಈ ಸ್ಥಳವು ನೂರಾರು ಡೊಲ್ಮೆನ್‍ಗಳನ್ನು ಹೊಂದಿರುವುದಕ್ಕೆ ವಿಶ್ವಖ್ಯಾತಿಯನ್ನು ಪಡೆದಿದೆ. ಡೊಲ್ಮೆನ್ ಎಂದರೆ ಶಿಲಾಯುಗದ ಕಲ್ಲಿನ ಸಮಾಧಿಗಳು ಎಂದರ್ಥ. ಅಸಲಿಗೆ ಈ ಕಾಲಕ್ಕೆ ಶಿಲಾಯುಗವೆಂಬ ಹೆಸರು ಬರಲು ಈ ಕಲ್ಲಿನ ಸ್ತಂಭಗಳಿಂದ ಕೂಡಿದ ಸಮಾಧಿಗಳ ರಚನೆಯೇ ಮೂಲ ಕಾರಣ. ಇಲ್ಲಿನ ರಚನೆಗಳು ತಮ್ಮ ಸಂಕೀರ್ಣತೆ ಮತ್ತು ಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲಿಯೇ ವಿಭಿನ್ನವಾಗಿವೆ.

ಮಲ್ಲಚಂದ್ರನ್‍ನಲ್ಲಿ ನಿರ್ಮಿಸಿರುವ ಸಮಾಧಿಗಳು ಕುಟುಂಬದ ಸಮಾಧಿಗಳು ಎಂದು ತಿಳಿದುಬಂದಿದೆ.ಇಲ್ಲಿಗೆ ಭೇಟಿಕೊಟ್ಟಾಗ ನೀವು ಸಹ ಇವುಗಳನ್ನು ಗಮನಿಸಬಹುದು. ಒಂದು ದೊಡ್ಡ ಸಮಾಧಿಯ ಸುತ್ತ ಹಲವಾರು ಚಿಕ್ಕ ಸಮಾಧಿಗಳು ಇಲ್ಲಿ ಕಾಣಸಿಗುತ್ತವೆ. ಇಂತಹದೆ ಡೊಲ್ಮೆನ್‍ಗಳು ಕೇರಳದ ಮರಯೂರಿನಲ್ಲಿ ಕಾಣಸಿಗುತ್ತವೆ.

ಈ ಸಮಾಧಿಗಳ ಜೊತೆಗೆ ಇಲ್ಲಿ ಕಲ್ಲಿನ ಚಿತ್ರಗಳನ್ನು, ಕಲ್ಲು ರಾಶಿಯ ವೃತ್ತಗಳು ಮತ್ತು ಚಿತಾಭಸ್ಮಗಳನ್ನು ಹೂತಿರುವುದನ್ನು ಕಾಣಬಹುದು. ಈ ಜನಗಳಿಗೆ ಪುನರ್ಜನ್ಮದ ಮೇಲೆ ನಂಬಿಕೆಯಿತ್ತು. ಹಾಗಾಗಿ ಅವರು ಮರಣಾನಂತರ ಜೀವಿಸಲು ಅಗತ್ಯವಿದ್ದ ವಸ್ತುಗಳನ್ನು ಇಡುತ್ತಿದ್ದರು. ಮಲ್ಲಚಂದ್ರನ್ ಇತಿಹಾಸಾಸಕ್ತರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಈ ಸ್ಥಳವು ಪ್ರಾಚೀನ ಇತಿಹಾಸ ಮತ್ತು ಆಧುನಿಕ ಕಾಲವನ್ನು ಕಾಲ ಮತ್ತು ಸ್ಥಳದ ಪರಿವೆ ಇಲ್ಲದೆ ಒಂದು ಗೂಡಿಸಿರುವ ಕೆಲವೇ ಕೆಲವು ಸ್ಥಳಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun