Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಆಕರ್ಷಣೆಗಳು » ಅರುಲ್ಮಿಗು ಮರಗದಮಿಗೈ ಚಂದ್ರ ಚೂಡೇಶ್ವರ ದೇವಾಲಯ

ಅರುಲ್ಮಿಗು ಮರಗದಮಿಗೈ ಚಂದ್ರ ಚೂಡೇಶ್ವರ ದೇವಾಲಯ, ಕೃಷ್ಣಗಿರಿ

1

ಅರುಲ್ಮಿಗು ಮರಗದಮಿಗೈ ಚಂದ್ರ ಚೂಡೇಶ್ವರ ದೇವಾಲಯವು ಹೊಸೂರಿನಲ್ಲಿ ನೆಲೆಗೊಂಡಿದೆ. ಇದು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಒಂದು ಬೆಟ್ಟದ ಮೇಲೆ, ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ನೆಲೆಗೊಂಡಿದೆ. ಇಲ್ಲಿನ ಪರಿಸರವು ಇಂದಿಗೂ ನಿಷ್ಕಲ್ಮಷವಾಗಿದೆ. ಇಲ್ಲಿ ತಮಿಳು ನಾಡು ಪ್ರವಾಸೋದ್ಯಮವತಿಯಿಂದ ನಿರ್ವಹಿಸಲ್ಪಡುವ ಒಂದು ವೀಕ್ಷಣಾಲಯ ಮತ್ತು ಮಕ್ಕಳ ಪಾರ್ಕಿದೆ.

ಹೆದ್ದಾರಿಗೆ ಸಮೀಪವಿರುವುದರಿಂದ ಇಲ್ಲಿ ಸದಾ ಜನ ಜಂಗುಳಿ ಇರುತ್ತದೆ. ಹೆದ್ದಾರಿಯಲ್ಲಿ ಇತರೆ ಸ್ಥಳಗಳಿಗೆ ಪ್ರವಾಸ ಹೊರಟವರು ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ. ಅಲ್ಲದೆ ಇಲ್ಲಿರುವ ಉದ್ಯಾನವನದಲ್ಲಿ ವಿಹಾರ ಮಾಡಲು ಸಹ ಜನರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಈ ದೇವಾಲಯವು ಎತ್ತರದಲ್ಲಿರುವ ಕಾರಣ ಇಲ್ಲಿಂದ ಹೊಸೂರು ನಗರದ ವಿಹಂಗಮ ನೋಟವನ್ನು ಕಾಣಬಹುದು.

ಇಲ್ಲಿನ ವೀಕ್ಷಣಾಲಯವು ನಕ್ಷತ್ರ ಮತ್ತು ಬಾಹ್ಯಕಾಶದ ಕುರಿತಾಗಿ ಆಸಕ್ತರಿಗೆ ಮಾಹಿತಿ ಒದಗಿಸುತ್ತಿದೆ. ಇಲ್ಲಿನ ದೇವಾಲಯ ಮತ್ತು ವೀಕ್ಷಣಾಲಯವು ಒಂದಕ್ಕೊಂದು ಪರಸ್ಪರ ವಿರೋಧಾಭಾಸವನ್ನುಂಟು ಮಾಡಿದರು, ಅವರವರ ಭಾವಕೆ ಮತ್ತು ಭಕ್ತಿಗೆ ಎಂಬಂತೆ ಬರುವವರ ಇಚ್ಛೆಗೆ ಅನುಗುಣವಾಗಿ ಅವರನ್ನು ತೃಪ್ತಿ ಪಡಿಸುತ್ತ ಸಾಗಿವೆ. ಏನೇ ಇರಲಿ ಅರುಲ್ಮಿಗು ಮರಗದಮಿಗೈ ಚಂದ್ರ ಚೂಡೇಶ್ವರ ದೇವಾಲಯವು ನೋಡಬಹುದಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu