ಕೊಟ್ಟಾಯಂನ ಪಲ್ಲೋಮ್ ತಾಲ್ಲೂಕಿನಲ್ಲಿರುವ ನಟ್ಟಕಂ ಒಂದು ಪುಟ್ಟ ಗ್ರಾಮ.ಕೊಟ್ಟಾಯಂ ನಗರ ಪ್ರದೇಶದಿಂದ ಅಂದಾಜು 2.5 ಕಿ.ಮೀ. ದೂರದಲ್ಲಿರದೆ. ಹಚ್ಚ ಹಸಿರಿನ ಹಿನ್ನೆಲೆಯಲ್ಲಿ ತನ್ನ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವುದೇ ಈ ಗ್ರಾಮದ ಆಕರ್ಷಣೆಯಾಗಿದೆ. ಬೇಸಿಗೆಯಲ್ಲಿ ಈ ಪ್ರದೇಶಕ್ಕೆ ದೇಶವಿದೇಶಗಳಿಂದ ಬರುವ ಸುಂದರವಾದ ಪಕ್ಷಿಗಳನ್ನು ಕಾಣಬಹುದು. ಚಿಲಿಪಿಲಿ ಗುಟ್ಟುವ ಹಕ್ಕಿಗಳ ಇಂಪಾದ ಸಂಗೀತದಿಂದಾಗಿ ನಟ್ಟಕಂ ಒಂದು ಸ್ವರ್ಗದಂತೆ ಭಾಸವಾಗುತ್ತದೆ. ಕೊಟ್ಟಾಯಂ ಬಂದರು ಹಾಗೂ ಕಂಟೇನರ್ ಟರ್ಮಿನಲ್ (ಕೆಪಿಸಿಟಿ)ಇದೇ ಗ್ರಾಮದಲ್ಲಿದೆ. ಇಲ್ಲಿಗೆ ಬಂದರೆ ಪ್ರಾಕೃತಿ ಅಥವಾ ಆಯುರ್ವೇದ ಮಸಾಜ್ ಮಾಡಿಸಿಕೊಳ್ಳಬಹುದು. ಅಲ್ಲಿದೆ ಇಲ್ಲಿ ಸ್ವಿಮಿಂಗ್, ಫಿಶಿಂಗ್ ಹಾಗೂ ಬೋಟಿಂಗ್ ಕೂಡ ತುಂಬಾ ಫೇಮಸ್. ಇತ್ತೀಚೆಗಂತೂ ಈ ಪುಟ್ಟ ಗ್ರಾಮ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದೆ. ಛಾಯಾಗ್ರಹಣದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇದ್ದರೆ ನಟ್ಟಕಂ ಗ್ರಾಮಕ್ಕೆ ಭೇಟಿ ನೀಡುವುದು ಉತ್ತಮ.


Click it and Unblock the Notifications