ಈ ವಸ್ತು ಸಂಗ್ರಹಾಲವು ನೀಲಗಿರಿಯ ಇತಿಹಾಸದ ಬಗ್ಗೆ ಬೆಳಕು ಬೀರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ನೀಲಗಿರಿಯ ಆರಂಭ ಕಾಲದ ಬೆಳವಣಿಗೆ ಕಾರಣಕರ್ತರು, ಸರ್ಕಾರದ ಕೊಡುಗೆ, ಬ್ರಿಟೀಷರ ಕೊಡುಗೆ, ಪ್ರಾಣಿಪಕ್ಷಿಗಳ ಪ್ರತಿರೂಪ, ಅಪರೂಪದ ವಸ್ತುಗಳು, ಇವುಗಳೆಲ್ಲವನ್ನು ಒಳಗೊಂಡು ನೀಲಗಿರಿಯ ಪೂರಕಪರಿಚಯ ಮಾಡಿಸುವ ಒಳ್ಳೆಯ ಪ್ರಯತ್ನವನ್ನು ಕಾಣಬಹುದು. ನೀಲಗಿರಿಯ ಉಲ್ಲೇಖಿತ ಇತಿಹಾಸವು ಬ್ರಿಟೀಷರ ಆಳ್ವಿಕೆಯ ಕಾಲದಿಂದ ಇಲ್ಲಿ ನೋಡಬಹುದು.


Click it and Unblock the Notifications