ಗರಾಡಿಯ ಮಹಾದೇವ್ ದೇವಾಲಯವು ಕೋಟಾದ ಬಳಿ ಹರಿಯುವ ಚಂಬಲ್ ನದಿ ಸಮೀಪದಲ್ಲಿರುವ ಪ್ರಮುಖ ದೇವಾಲಯವಾಗಿದೆ. ಈ ಸ್ಥಳವು ಮಂತ್ರಮುಗ್ಧಗೊಳಿಸುವಂತಹ ಚಂಬಲ್ ಕಮರಿಗಳ ಮತ್ತು ನದಿ ಮುಖಜ ಭೂಮಿಯ ನೋಟವನ್ನು ಒದಗಿಸುತ್ತದೆ. ಇದು ಈ ಪ್ರಾಂತ್ಯದ ಪ್ರಮುಖ ವಿಹಾರ ತಾಣಗಳಲ್ಲಿ ಒಂದಾಗಿ ಸ್ಥಾನಪಡೆದಿದೆ. ಪ್ರಕೃತಿಯ ಮಡಿಲಲ್ಲಿ, ಪ್ರಶಾಂತವಾದ ವಾತಾವರಣದಲ್ಲಿ ಕಾಲ ಕಳೆಯುವ ಉದ್ದೇಶಕ್ಕಾಗಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ.


Click it and Unblock the Notifications