ಮಕ್ಕಳ ನೆಚ್ಚಿನ ತಾಣವಾದ ರಂಕಾಲಾ ಚೌಪಾಟಿಯು ನಿಜವಾಗಿಯೂ ಕುಟುಂಬದ ಜೊತೆ ಒಂದು ಸಂಜೆ ಕಳೆಯಲು ಹೇಳಿ ಮಾಡಿಸಿದ ಸ್ಥಳ. ಉತ್ಸಾಹ ಭರಿಸಲು ಒಂದು ಸುಂದರವಾದ ಉದ್ಯಾನವನವಾಗಿದೆ. ಇದರ ಹತ್ತಿರದಲ್ಲಿಯೆ ಶಾಲಿನಿ ಅರಮನೆಯಿದ್ದು ನೋಡಲೇ ಬೇಕಾದ ಸ್ಥಳವಾಗಿದೆ.
ಕೊಲ್ಹಾಪುರಿನಲ್ಲಿರುವ ಈ ಚೌಪಾಟಿ ಸರೋವರವು ರಂಕಾಭೈರವ ದೇವಸ್ಥಾನದಿಂದ ಪ್ರೇರಿತಗೊಂಡು ಅದರ ಹಸರನ್ನೇ ಪಡೆದಿದೆ. ಈ ಜಾಗದಲ್ಲಿರುವ ಇನ್ನಿತರ ರಚನೆಗಳ ಹಾಗೆ ಈ ಮಾನವ ನಿರ್ಮಿತ ಸರೋವರವೂ ಕೂಡ ಶಾಹು ಮಹಾರಾಜರಿಂದ ನಿರ್ಮಾಣಗೊಂಡಿದೆ.
ಇಲ್ಲಿಗೆ ಬರುವ ಪ್ರವಾಸಿಗರು ದೋಣಿ ವಿಹಾರದಿಂದ ಹಿಡಿದು ಕುದುರೆ ಸವಾರಿಯವರೆಗೂ ಅನೇಕ ಚಟುವಟಿಕೆಗಳನ್ನು ಮಾಡಬಹುದಾಗಿದೆ.


Click it and Unblock the Notifications