ಈ ಮಾರ್ಗದಲ್ಲಿ ಹಾದುಹೋಗುವ ಪ್ರವಾಸಿಗರಿಗೆ, ಕೊಡಚಾದ್ರಿ ಪರ್ವತಗಳ ಅತಿ ಸುಂದರ ಸ್ಥಳಗಳಲ್ಲಿ ಒಂದಾದ ಚಿತ್ರಮೂಲದ ಭೇಟಿಗೆ 'ಶಿಫಾರಸ್ಸು ಮಾಡಬಹುದು. ಧಾರ್ಮಿಕ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದ್ದು, ಇದು ಶ್ರೀ ಆದಿ ಶಂಕರರು ಕೆಲವು ದಿನಗಳು ಧ್ಯಾನ ಮಾಡಿದ ಸ್ಥಳ ಎಂದು ತಿಳಿಯಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ಈ ಸ್ಥಳದಲ್ಲಿ ದೇವಿ ಮೂಕಾಂಬಿಕೆಯು ಶಂಕರಾಚಾರ್ಯರ ಮುಂದೆ ಬಂದು ಮೂಕಾಂಬಿಕಾದೇವಿಯ ದೇವಾಲಯದ ತನಕ ಅವರನ್ನು ಅಟ್ಟಿಸಿಕೊಂಡು ಬಂದಳು ಎನ್ನಲಾಗುತ್ತದೆ. ಸಾಹಸ ಪ್ರವೃತ್ತಿಯ ಪ್ರವಾಸಿಗರು ಬೆಟ್ಟದ ಪಶ್ಚಿಮ ಭಾಗದಲ್ಲಿನ ಕಡಿದಾದ ಕಾಲ್ದಾರಿಯಿಂದ ಗುಹೆ ತಲುಪಬಹುದು.


Click it and Unblock the Notifications