ಸೇಂಟ್ ಮೇರೀಸ್ ಕ್ಯಾಥೆಡ್ರಲ್ ಬೆಸಿಲಿಕಾ ಕೇರಳದ ಹಳೆಯ ಚರ್ಚುಗಳಲ್ಲಿ ಒಂದು. ಕ್ಯಾಥೆಡ್ರಲ್ ಮೂಲತಃ ಕ್ರಿ.ಶ 112 ರಲ್ಲಿ ಮಾರ್ ಲೂಯಿಸ್ ಪಝೆಪರಾಂಬಿಲ್ ನಿರ್ಮಿಸಿದ್ದನು. ಬಳಿಕ ಕಾಲನಾಘಾತಕ್ಕೆ ತುತ್ತಾಗಿದ್ದ ಇದನ್ನು 20 ಮಾರ್ಚ್ 1974 ರಂದು ಪೋಪ್ ಪಾಲ್ VI ಮಾರ್ಗದರ್ಶನದಲ್ಲಿ ಪುನರ್ ನಿರ್ಮಾಣ ಮಾಡಲಾಯಿತು. ಈ ಕ್ಯಾಥೆಡ್ರಲ್ ಮೇರಿ ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, 'ಬಂದರುಗಳ ನಮ್ಮ ಹೆಣ್ಣು' ಎಂದು ಪೂಜಿಸಲ್ಪಡುತ್ತಿದೆ. ಈ ಕಟ್ಟಡವನ್ನು ರೋಮನ್ ಬೆಸಿಲಿಕಾ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಬೆಸಿಲಿಕಾ ಅನೇಕ ವರ್ಷಗಳ ಇತಿಹಾಸ ಹೊಂದಿದ್ದು ಸಮೃದ್ಧ ವಾಸ್ತುಶಿಲ್ಪ ವೈಭವವನ್ನು ಹೊಂದಿದೆ. ಎರ್ನಾಕುಲಂ ಸಮೀಪದಲ್ಲೇ ಇರುವ ಈ ಪ್ರದೇಶಕ್ಕೆ ಯಾವುದೇ ಪ್ರಯಾಸವಿಲ್ಲದೇ ತೆರಳಬಹುದಾಗಿದ್ದು, ಬೆಸೆಲಿಕಾದಲ್ಲಿ ಮೊಂಬತ್ತಿ ಸೇವೆ ಸಲ್ಲಿಸಲು ಅವಕಾಶವಿದೆ.


Click it and Unblock the Notifications