ಪರಿಷತ್ ತಂಪುರನ್ ಮ್ಯೂಸಿಯಂ ಪ್ರಸಿದ್ಧ ಪರ್ವತ ಮ್ಯೂಸಿಯಂ ಎಂದು ಹೆಸರಾಗಿದೆ. ಪ್ರಪಂಚದ ಎಲ್ಲಡೆಯ ವಿಶಿಷ್ಟ ಕಲೆಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಮೊಘಲರ ಕಾಲದ ವರ್ಣ ಚಿತ್ರಗಳು, ಪ್ರಾಚೀನ ಶಿಲ್ಪಗಳೂ ಕೂಡ ಇಲ್ಲಿವೆ. ಪ್ರಾಚೀನ ಕಾಲದ ನಾಣ್ಯಗಳು, ಐತಿಹಾಸಿಕ, ಸಾಂಸ್ಕೃತಿಕ ವಿಶೇಷಗಳ ಅಪರೂಪದ ಸಂಗ್ರಹ ಇಲ್ಲಿದ್ದು, ಯುವ ಸಮುದಾಯ ಇಲ್ಲಿಗೇ ಭೇಟಿ ನೀಡಲೇಬೇಕು.
ಪ್ರಾಚೀನ ಕಾಲದ ಕಲಾತ್ಮಕ ಪ್ರತಿಭೆಯನ್ನು ತಿಳಿಯುವುದಕ್ಕಾಗಿ, ಹಿಂದಿನ ಕಾಲದ ಬಗ್ಗೆ ಅಭಿರುಚಿಗಳನ್ನು ಅರಿಯಲು ಈ ಮ್ಯೂಸಿಯಂ ಸಹಕಾರಿಯಾಗಿದೆ. ಕಾಲೇಜು ವಿದ್ಯಾರ್ಥಿಗಳು, ಪುರಾತತ್ತ್ವಜ್ಞರು ಅಧ್ಯಯನಕ್ಕಾಗಿ ಇಲ್ಲಿಗೆ ಆಗಮಿಸುತ್ತಲೇ ಇರುವುದರಿಂದ ಇಲ್ಲಿ ಯಾವಾಗಲೂ ದಟ್ಟನೆ ಇರುತ್ತದೆ. ದಿನದ ಕೆಲವೇ ಗಂಟೆಗಳ ಮಾತ್ರ ಈ ಮ್ಯೂಸಿಯಂ ಬಾಗಿಲು ತೆರೆದಿರುತ್ತದೆಯಾದ್ದರಿಂದ ನೀವು ಸರಿಯಾಗಿ ವಿಚಾರಿಸಿದ ಬಳಿಕವೇ ಇಲ್ಲಿಗೆ ಬರುವುದೊಳಿತು.


Click it and Unblock the Notifications