ಡೇವಿಡ್ ಹಾಲ್, ಇದು ಡಚ್ ಈಸ್ಟ್ ಇಂಡಿಯಾ ಕಂಪನಿ ನಿರ್ಮಿಸಿದ ಒಂದು ಪರಂಪರೆಯ ಕಟ್ಟಡ. ಫೋರ್ಟ್ ಕೊಚ್ಚಿ ಮೆರವಣಿಗೆ ಮೈದಾನದ ಬಳಿಯೇ ಇದೆ. ಶತಮಾನಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ ಯಹೂದಿ ಮೂಲದ ವ್ಯಾಪಾರಿ ಡೇವಿಡ್ ಕೋಡರ್ ನ ಹೆಸರನ್ನೇ ಇದಕ್ಕೆ ಇಡಲಾಗಿದೆ. ಪ್ರಾಚೀನ ಪರಂಪರೆಯ ಈ ಕಟ್ಟಡವನ್ನು 1695 ರಲ್ಲಿ ನಿರ್ಮಿಸಲಾಯಿತು. ಡಚ್ ದಳಪತಿಗಳಾಗಿದ್ದ ಹೆಂಡ್ರಿಕ್ ವ್ಯಾನ್ರೀಡೆ ಮತ್ತು ಹೊರ್ಟಸ್ ಮಲಬಾರಿಕಸ್ ಅವರು ಇದೇ ಭವನದಲ್ಲಿ ವಾಸಿಸುತ್ತಿದ್ದರೆಂದು ಇತಿಹಾಸದಲ್ಲಿ ಉಲ್ಲೇಖಗಳಿವೆ. ಡೇವಿಡ್ ಭವನವನ್ನು CGH ಅರ್ಥ್ ಕಂಪನಿಗೆ ವಹಿಸಿಕೊಡಲಾಗಿದ್ದು, ಅದರ ವತಿಯಿಂದ ಆರ್ಟ್ ಗ್ಯಾಲರಿ ಮತ್ತು ಕೆಫೆ ನಿರ್ಮಾಣವಾಗಿದೆ. 317 ವರ್ಷಗಳಷ್ಟು ಹಳೆಯ ವರ್ಣಚಿತ್ರಗಳು, ಸಾಂಸ್ಕೃತಿಕ ಸಂಗತಿಗಳ ಪ್ರದರ್ಶನದ ಉತ್ತಮ ವೇದಿಕೆಯಾಗಿ ಇದು ಕಾರ್ಯನಿರ್ವಹಿಸುತ್ತಿದೆ.


Click it and Unblock the Notifications