ಸೂರ್ಯಮಲ್ ಇರುವುದು ಥಾಣೆ ಜಿಲ್ಲೆಯ ಖೊಡಾಲಾ ಪ್ರದೇಶದಲ್ಲಿ. ಇದರ ಸುತ್ತಮುತ್ತಲ ಪ್ರದೇಶದಲ್ಲೆ ಅತ್ಯಂತ ಎತ್ತರದ ಸ್ಥಳ ಇದು ಎಂದು ಪರಿಗಣಿಸಲಾಗಿದೆ. ಎಲ್ಲಿ ನೋಡಿದರೂ ದಟ್ಟ ಹಸಿರು... ಸುಂದರ ವನ ಸಾಮ್ರಾಜ್ಯ. ಪ್ರವಾಸಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ.
ಸೂರ್ಯಮಲ್ ಪೀಕ್‌ಗೆ ನೀವು ಹೋಗುವಾಗ ಚಾರಣವೆ ಸೂಕ್ತ. ಇದು ಚಾರಣಿಗರ ಸ್ವರ್ಗ. ಗುಡ್ಡವನ್ನು ಹತ್ತಿ ಮೇಲೆ ಹೋಗುವ ಸಂಕಷ್ಟವೆಲ್ಲಾ ಮೇಲೆ ಹತ್ತಿದ ಮೇಲೆ ಮಂಗಮಾಯವಾಗುತ್ತದೆ. ಅಂಥ ಸುಂದರ ನೋಟ ನಿಮಗಾಗಿ ಅಲ್ಲಿ ಕಾಯುತ್ತಿರುತ್ತದೆ. ಸೂರ್ಯಮಲ್‌ಗೆ ಸಮೀಪದಲ್ಲೆ ನ್ಯೂರೊ ಥೆರಪಿ ಸೆಂಟರ್ ಆಫ್ ಮೋಗಾ ಕೂಡಾ ಇದೆ. ಒಮ್ಮೆ ಭೇಟಿ ಕೊಡಲೇಬೇಕಾದ ಸ್ಥಳವಿದು.


Click it and Unblock the Notifications