Search
  • Follow NativePlanet
Share
ಮುಖಪುಟ » ಸ್ಥಳಗಳು » ಖೊಡಾಲಾ » ಹವಾಮಾನ

ಖೊಡಾಲಾ ಹವಾಮಾನ

ಖೊಡಾಲಾಗೆ ವರ್ಷದ ಯಾವುದೆ ಕಾಲದಲ್ಲೂ ಹೋಗಬಹುದು. ಬೇಸಿಗೆ ಕಾಲದಲ್ಲಿ ಮಾತ್ರ ಸ್ವಲ್ಪ ಹೆಚ್ಚು ಉಷ್ಣತೆಯಿರುತ್ತದೆ. ಬಿಸಿಲಿನ ಝಳ ಇಷ್ಟವಿಲ್ಲದಿದ್ದವರು ಈ ಅವಧಿಯನ್ನು ಬಿಟ್ಟು ಬೇರೆ ಮಳೆಗಾಲದ ಮಳೆಯಲ್ಲಿ ಅಥವಾ ಚಳಿಗಾಲದ ಶೀತವನ್ನು ಅನುಭವಿಸುತ್ತಾ ಖೊಡಾಲಾದ ಸೌಂದರ್ಯವನ್ನು ವೀಕ್ಷಿಸಬಹುದು.

ಬೇಸಿಗೆಗಾಲ

ಖೊಡಾಲಾದ ಬೇಸಿಗೆ ಮೂರು ತಿಂಗಳ ಕಾಲದ್ದು. ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳು ಬಿರುಬೇಸಿಗೆ ಇಲ್ಲಿರುತ್ತದೆ. ಈ ಅವಧಿಯ ವಾತಾವರಣವು ಒಣಹವೆಯಿಂದ ಕೂಡಿರುತ್ತದೆ. ಹಾಗೆ ಸುಮಾರು 32 ಡಿಗ್ರಿ ಸೆಲ್ಷಿಯಸ್‌ ತಾಪಮಾನವನ್ನು ಹೊಂದಿರುತ್ತದೆ.

ಮಳೆಗಾಲ

ಖೊಡಾಲಾದ ಬೇಸಿಗೆಯ ಉಷ್ಣತೆಯನ್ನು ಹೊಡೆದೋಡಿಸುವುದೇ ಮಳೆಯ ರಭಸ. ಖೊಡಾಲಾದಲ್ಲಿ ಮಳೆಗಾಲ ಮಧ್ಯಮ ಪ್ರಮಾಣದ್ದಾಗಿರುತ್ತದೆ. ಮಳೆಯನ್ನು ನೀವು ಇಷ್ಟಪಡುತ್ತೀರಿ ಎಂದಾದರೆ ಖೊಡಾಲಾಕ್ಕೆ ಹೋಗಲು ನಿಮಗೆ ಇದು ಸೂಕ್ತ ಸಮಯ. ಈ ಸಮಯದಲ್ಲಿ ಇಲ್ಲಿನ ಪರಿಸರವೂ ಕಣ್ತುಂಬುವಂತಿರುತ್ತದೆ.

ಚಳಿಗಾಲ

ಡಿಸೆಂಬರಿನಿಂದ ಫೆಬ್ರುವರಿಯ ಅವಧಿಯಲ್ಲಿ ಇಲ್ಲಿನ ಚಳಿಗಾಲವು ಅತ್ಯಂತ ಪ್ರಶಾಂತವಾಗಿರುತ್ತದೆ. ಸುಮಾರು 16 ಡಿಗ್ರಿ ಸೆಲ್ಷಿಯಸ್‌ ತಾಪಮಾನ ಈ ಅವಧಿಯಲ್ಲಿರುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ಅತ್ಯಂತ ಪ್ರಶಸ್ತ. ಇಡಿ ಪ್ರದೇಶವನ್ನು ಆರಾಮವಾಗಿ ಸುತ್ತಾಡಬಹುದಾದಂತಹ ವಾತಾವರಣವಿದು.