ಖೊಡಾಲಾದಲ್ಲಿರುವ ದಿಯೋಬಂದ್ ದೇವಸ್ಥಾನವು ನದಿಯ ಹಿನ್ನೀರಿನಲ್ಲಿರುವ ಅತ್ಯಂತ ಜನಪ್ರಿಯ ದೇವಸ್ಥಾನ. ಮೂರೂ ಕಡೆ ನೀರಿನಿಂದಲೆ ತುಂಬಿದೆ. ಖೊಡಾಲಾದ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿಯಲ್ಲಿ, ಸಹ್ಯಾದ್ರಿ ಶ್ರೇಣಿಯ ಬುಡದಲ್ಲಿ ಈ ದೇವಸ್ಥಾನವಿದೆ. ಕೇರ್ವಾಡಿ ವೈಲ್ಡ್ ಕ್ಯಾಂಪ್‌ನ ಸಮೀಪದಲ್ಲೆ ಇದೆ.
ದಿಯೋಬಂದ್ ದೇವಸ್ಥಾನವು ಗಣೇಶನಿಗೆ ನಿರ್ಮಿಸಿದ ದೇವಸ್ಥಾನ. ಗಣೇಶ ಉತ್ಸವ ಮತ್ತು ವಿನಾಯಕ ಚತುರ್ಥಿಯಂದು ಇಲ್ಲಿಗೆ ಭಕ್ತಸಾಗರವೆ ಹರಿದುಬರುತ್ತದೆ.
ಗುಡ್ಡದ ಹಿನ್ನೆಲೆ ಮತ್ತು ಹಿನ್ನೀರಿನ ಮುನ್ನೆಲೆ ದೇವಸ್ಥಾನಕ್ಕೆ ಸುಂದರವಾದ ನೋಟವನ್ನು ಕಲ್ಪಿಸಿದೆ. ಇಲ್ಲಿಗೆ ಬರುವ ಭಕ್ತರಿಗೆ ಒಂದು ಕ್ಷಣ ಧ್ಯಾನ ಮಾಡುವ ಮನಸಾದರೆ ಅದು ಅಚ್ಚರಿಯೆನಲ್ಲ.
ದೇವಸ್ಥಾನದ ಸುತ್ತಲಿನ ಪ್ರದೇಶವೂ ಕೂಡಾ ಒಂದು ಸುಂದರ ಪಿಕ್‌ನಿಕ್ ಸ್ಪಾಟ್. ದಿಯೋಬಂದ್ ಜಲಪಾತವನ್ನು ಹಿನ್ನೆಲೆಯಲ್ಲಿ ನೋಡಬಹುದು.


Click it and Unblock the Notifications