ಚಾರಣ ಮತ್ತು ಕಲ್ಲು ಬಂಡೆ ಹತ್ತುವುದು (ರಾಕ್ ಕ್ಲೈಂಬಿಂಗ್) ಇವು ಕೀಲಾಂಗ್ ನಲ್ಲಿನ ಜನಪ್ರಿಯ ಸಾಹಸ ಚಟುವಟಿಕೆಗಳಾಗಿದ್ದು, ಪ್ರವಾಸಿಗರು ಈ ಚಟುವಟಿಕೆಗಳನ್ನು ಆನಂದಿಸಬಹುದಾಗಿದೆ. ಇಲ್ಲಿ ಚಾರಣಕ್ಕೆ ಉತ್ತಮ ಸಮಯ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವಿನ ಅವಧಿ. ಪ್ರವಾಸಿಗರಿಗೆ ಸಾಹಸ ಅವಕಾಶ ನೀಡುವ ಸುಮಾರು 14 ಪ್ರವಾಸಿ ಮಾರ್ಗಗಳಿವೆ. ಇವುಗಳಲ್ಲಿ ಜನಪ್ರಿಯ ಚಾರಣ ಮಾರ್ಗಗಳಲ್ಲಿ ಕೆಲವು, ಆಶಾ ಗಲ್ಲಿ ಪಾಸ್, ಕುಗ್ಟಿ ಪಾಸ್, ಚೋಬಿಯಾ ಪಾಸ್, ಕಲೈಚ್ಚು ಪಾಸ್, ಗೃಹದ್ದರ್ ಪಾಸ್, ರಂಚಾ ಗಲಿ ಪಾಸ್ ಮತ್ತು ಕುನ್ ಝುಮ್ ಪಾಸ್ ಮೊದಲಾದವುಗಳು.


Click it and Unblock the Notifications