Search
  • Follow NativePlanet
Share
ಮುಖಪುಟ » ಸ್ಥಳಗಳು » ಕೀಲಾಂಗ್ » ಆಕರ್ಷಣೆಗಳು » ಗುರು ಘಂಟಾಲ್ ಮಠ

ಗುರು ಘಂಟಾಲ್ ಮಠ, ಕೀಲಾಂಗ್

1

ಗಂಡೋಲಾ ಎಂದೂ ಕರೆಯಲ್ಪಡುವ ಗುರು ಘಂಟಾಲ್ ಮಠ, ಕೀಲಾಂಗ್ ನಿಂದ 8 ಕಿ. ಮೀ ದೂರದಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಲಾಹೌಲ್ ಜಿಲ್ಲೆಯ ಅತ್ಯಂತ ಹಳೆಯ ಮಠ ಎಂದು ಪರಿಗಣಿಸಲಾಗಿರುವ ಈ ಗೊಂಪ 8 ನೇ ಶತಮಾನದಲ್ಲಿ ಗುರು ಪದ್ಮ ಸಂಭವನಿಂದ ಸ್ಥಾಪಿಸಲ್ಪಟ್ಟಿತು. ಈ ಆಶ್ರಮದ ಪ್ರಮುಖ ಆಕರ್ಷಣೆಯೆಂದರೆ ಮರದಿಂದ ಮಾಡಿದ ವಿಗ್ರಹಗಳು. ಈ ಮಠವು ಪಿರಮಿಡ್ ಆಕಾರದ ಛಾವಣಿಗಳನ್ನು ಮತ್ತು ಸಂಕೀರ್ಣ ಕೆತ್ತನೆಗಳನ್ನು ಹೊಂದಿರುವ ಒಂದು ಅನನ್ಯ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಇಲ್ಲಿನ ವಿಗ್ರಹಗಳನ್ನು ಮಠದ ಕಷ್ಟದ ಪರಿಸ್ಥಿಯಿಂದಾಗಿ ತುಪ್ಚಿಲಿಂಗ್ ಗ್ರಾಮದ ಬಳಿ ಇರುವ ಮತ್ತೊಂದು ಆಶ್ರಮಕ್ಕೆ ಸ್ಥಳಾಂತರಿಸಲಾಗಿದೆ.

ಚಂದ್ರ ಮತ್ತು ಭಗ ನದಿಗಳ ತೀರದಲ್ಲಿ ನೆಲೆಯಾಗಿರುವ ಈ ಮಠದಲ್ಲಿ ಭಗವಾನ್ ಬುದ್ಧನ ಕರುಣೆ ಸಾಕಾರಗೊಳಿಸಿದ ಬೋಧಿಸತ್ವ ಅವಲೋಕಿತೇಶ್ವರನ ಹಾನಿಗೊಳಗಾದ ಅಮೃತಶಿಲೆಯಲ್ಲಿ ಮಾಡಿದ ಶಿರವನ್ನು ಇಲ್ಲಿ ಕಾಣಬಹುದು. ಈ ಮಠದ ಇತಿಹಾಸ 2 ನೇ ಶತಮಾನದಲ್ಲಿನ ನಾಗಾರ್ಜುನ ಸಮಯಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಮಠದ ಖಾಸಗಿ ಸಭಾಂಗಣದಲ್ಲಿ ಹಿಂದೂ ದೇವತೆ ಕಾಳಿಯ ಒಂದು ಕಪ್ಪು ಕಲ್ಲಿನ ಚಿತ್ರವಿದ್ದು, ಹೊಂದೊಮ್ಮೆ ಈ ಮಠವು ದೇವಾಲಯವಾಗಿದ್ದಿರಬೇಕೆಂಬುದನ್ನು ಸೂಚಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed