ರಂಬಾರವು ಒಂದು ಹಳ್ಳಿಯಾಗಿದೆ. ಇದು ಕೇದಾರನಾಥಕ್ಕೆ ತೆರಳುವ ಭಕ್ತರು ವಿಶ್ರಾಂತಿ ಪಡೆಯುವ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 2591 ಮೀಟರ್ ಎತ್ತರದಲ್ಲಿದ್ದು, ಕೇದಾರನಾಥಕ್ಕೆ ಸಾಗುವ 14 ಕಿ.ಮೀ. ದೂರದ ಮಾರ್ಗದ ಮಧ್ಯದಲ್ಲಿ ಬರುತ್ತದೆ. ಇಲ್ಲಿಂದ ತಲಾ ಏಳು ಕಿಮಿನಷ್ಟು ದೂರದಲ್ಲಿ ಕೇದಾರನಾಥ ಹಾಗೂ ಇನ್ನೊಂದು ಕಡೆ ಗೌರಿಕುಂಡ ಸಿಗುತ್ತದೆ. ಯಾವುದೇ ಕಡೆ ತೆರಳುವವರಿಗೂ ಇದು ವಿಶ್ರಾಂತಿ ಪಡೆಯಲು ನಿಲ್ಲುವ ಸ್ಥಳ. ಇಲ್ಲಿ ಪ್ರವಾಸಿಗರಿಗೆ ವಸತಿ ಸೌಲಭ್ಯವನ್ನು ಜಿಎಂವಿಎನ್ ಟೂರಿಸ್ಟ್ ಸಂಸ್ಥೆಯ ನೀಡಿದ್ದು, ಅದಕ್ಕಾಗಿ ಪ್ರವಾಸಿ ಮಂದಿರ ನಿರ್ಮಿಸಿದೆ.


Click it and Unblock the Notifications