ಕೇದಾರನಾಥ, ಕೇದಾರ ಹಾಗೂ ಭಾರತ್‌ಕುಂಡ ಮೂರು ಪ್ರಮುಖ ಬೆಟ್ಟಗಳ ಸಂಗಮ ಕೇದಾರ ಮಾಸ್ಸಿಫ್ (ಶೃಂಗ ಶ್ರೇಣಿ/ಶಿಖರ ಪಂಕ್ತಿ) ಆಗಿದೆ. ಇದು ಸಮುದ್ರ ಮಟ್ಟದಿಂದ 6000 ಮೀಟರ್ ಎತ್ತರದಲ್ಲಿದೆ. ಹಿಮಾಚ್ಛಾದಿತ ಪ್ರದೇಶ ಇದಾಗಿದ್ದು, ಮಂದಾಕಿನಿ ನದಿಯನ್ನು ಒಳಗೊಂಡಿದೆ. ಕೇದಾರನಾಥ್ ಹಾಗೂ ಕೇದಾರನಾಥ ಡೋಮ್ ಇದಕ್ಕೆ ಸರಿಸಮನಾಗಿ ನಿಂತಿವೆ.
ಕೇದಾರನಾಥ ಪರ್ವತ 6831 ಮೀಟರ್ ಎತ್ತರದಲ್ಲಿದ್ದು ಇಲ್ಲಿಗೆ ತಲುಪುವುದು ಬಹಳ ಕಷ್ಟ. ಇನ್ನು ಕೇದಾರನಾಥ ಡೋಮ್ ಕೂಡ ಸಾಕಷ್ಟು ಸವಾಲಿನಿಂದಲೇ ಕೂಡಿದ್ದಾಗಿದೆ. ಈ ಪ್ರದೇಶದಲ್ಲಿ ಆಮ್ಲಜನಕದ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ. ಅಷ್ಟು ಎತ್ತರದ ತಾಣ ಇವಾಗಿವೆ. ಟ್ರೆಕ್ಕಿಂಗ್ ತೆರಳುವವರಿಗೆ ಕೇದಾರನಾಥ ದೇವಾಲಯ ಹಿಂಭಾಗದಿಂದ ಭರತಕುಂಡದತ್ತ ತೆರಳಲು ಸೂಚಿಸಲಾಗುತ್ತದೆ. ಚೋರಭರಿ ತಾಲ್‌ವು ಇಲ್ಲಿಂದ 3 ಕಿ.ಮೀ. ದೂರದಲ್ಲಿದೆ. ಇದು ಕೇದಾರನಾಥ ಮಾಸ್ಸಿಫ್ ಕಣಿವೆಯನ್ನು ಸೃಷ್ಟಿಸಿದೆ.


Click it and Unblock the Notifications