ಸನ್ ಸೆಟ್ ಪಾಯಿಂಟ್ ನಿಜಕ್ಕೂ ಒಂದು ಸುಂದರವಾದ ದೃಶ್ಯ. ಪ್ರವಾಸಿಗರು ಇಲ್ಲಿ ನಿಂತು ಸೂರ್ಯಾಸ್ತವಾಗುವುದನ್ನು ನೋಡುತ್ತಾ ಎಂಜಾಯ್ ಮಾಡುತ್ತಾರೆ. ಸೂರ್ಯ ಮುಳುಗುವಾಗ ಅದರ ಕಿರಣಗಳು ಸುತ್ತಲಿನ ಪ್ರದೇಶದಲ್ಲಿ ಹರಡುವ ಕೆಂಪು ಬಣ್ಣ, ಹಸಿರು ಗಿಡಮರಗಳನ್ನೆಲ್ಲಾ ಕೆಂಪಾಗಿಸುವುದನ್ನು ನೋಡುವುದೇ ಚೆಂದ. ಇಂಗ್ಲೀಷಿನಲ್ಲಿ ಸ್ಟನ್ನಿಂಗ್ ಬ್ಯೂಟಿ ಅಂತಾರಲ್ಲ, ಪ್ರಕೃತಿ ಅಂತಹ ಸೌಂದರ್ಯ ತಾಳಿರುತ್ತದೆ. ಇದು ಕಸೌಲಿ ಕ್ಲಬ್ ನಿಂದ ಸುಮಾರು 100 ಮೀ.ದೂರದಲ್ಲಿದ್ದು ಎತ್ತರ ಪ್ರದೇಶದಲ್ಲಿದೆ.


Click it and Unblock the Notifications