ಮಲಿಕ್ ದೀನಾರ್ ಮಸೀದಿ, ಕಾಸರಗೋಡು

ಮುಖಪುಟ » ಸ್ಥಳಗಳು » ಕಾಸರಗೋಡು » ಆಕರ್ಷಣೆಗಳು » ಮಲಿಕ್ ದೀನಾರ್ ಮಸೀದಿ

ಕಾಸರಗೋಡಿನ ಮಲಿಕ್ ದೀನಾರ್ ಮಸೀದಿಯು ಇಸ್ಲಾಂ ಧರ್ಮದ ಅನುಷ್ಟಾನದಲ್ಲಿ ಒಂದು ಪ್ರಮುಖ ಹೆಗ್ಗುರುತು ಎಂದು ಗುರುತಿಸಲ್ಪಟ್ಟಿರುವ ಮಸೀದಿಯಾಗಿದೆ. ಈ ಮಸೀದಿಯನ್ನು ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಇಸ್ಲಾಂ ಅನ್ನು ಪರಿಚಯಿಸಿದ ಮಲಿಕ್ ಇಬನ್ ದೀನಾರ್ ರವರು ಸ್ಥಾಪಿಸಿದರು. ಇದು ಭಾರತದ ಮುಸ್ಲಿಂರಿಗಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ ಇರುವ ಮುಸಾಲ್ಮಾನರಿಗು ಸಹ ಪ್ರಮುಖ ಯಾತ್ರ ಸ್ಥಳವಾಗಿದೆ. ಅದರಲ್ಲು ಪಶ್ಚಿಮ ಕರಾವಳಿಯ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಿರುತ್ತಾರೆ.

ಮಲಿಕ್ ಇಬನ್ ದೀನಾರ್ ರವರು ಭಾರತಕ್ಕೆ ಆಗಮಿಸಿದ ದಿನವನ್ನು ಸ್ಮರಿಸುವುದಕ್ಕಾಗಿ ಇಲ್ಲಿ ಪ್ರತಿ ವರ್ಷವು ಭಾರೀ ಉತ್ಸವವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಪಾಲ್ಗೊಳ್ಳಲು ಭಾರತದ ಎಲ್ಲೆಡೆಯಿಂದ ಭಕ್ತಾಧಿಗಳು ಆಗಮಿಸುತ್ತಾರೆ.

ಈ ಮಸೀದಿಯ ವಾಸ್ತು ವಿನ್ಯಾಸವು ಇಸ್ಲಾಂ ಮಾದರಿಯಲ್ಲಿಲ್ಲದೆ ಸಾಂಪ್ರದಾಯಿಕ ಕೇರಳ ಶೈಲಿಯಲ್ಲಿದೆ. ಈ ಮಸೀದಿಯನ್ನು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸಲಾಗುತ್ತಿದೆ. ಇದು ನೋಡಲು ಸುಂದರವಾಗಿ ಮತ್ತು ಆಕರ್ಷಕವಾಗಿದೆ.

ಈ ಮಸೀದಿಯು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಮೂಲವನ್ನು ಹೊಂದಿರುವುದರಿಂದಾಗಿ ಕೇವಲ ಮುಸಲ್ಮಾನರಷ್ಟೇ ಅಲ್ಲದೆ, ಇತಿಹಾಸ, ಧರ್ಮದ ಉಗಮ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಕುರಿತು ಆಸಕ್ತಿ ಹೊಂದಿರುವ ಯಾರಾದರು ಸರಿ ನೋಡಲೆ ಬೇಕಾದ ಪುರಾತನ ಕಟ್ಟಡವಾಗಿದೆ.

Please Wait while comments are loading...