ನಗರದಿಂದ 6 ಕಿ.ಮೀ ಅಂತರದಲ್ಲಿ ಕುರುಮಗಡ ದ್ವೀಪದಲ್ಲಿರುವ ನರಸಿಂಹ ದೇವಸ್ಥಾನವು ಭೇಟಿ ನೀಡಬಹುದಾದ ಸ್ಥಳವಾಗಿದೆ. ಈ ದೇವಸ್ಥಾನವು ಹಿಂದು ಪುರಾಣದ ಪ್ರಕಾರ ಭಗವಾನ್ ವಿಷ್ಣುವಿನ ಅವತಾರವಾದ ನರಸಿಂಹ ದೇವರ ಸನ್ನಿಧಿಯಾಗಿದೆ. ಕೊಂಚ ಮೇಲ್ಭಾದಲ್ಲಿರುವುದರಿಂದ ಚಾರಣ ಮಾಡುತ್ತ ಸ್ವಲ್ಪ ಹತ್ತುತ್ತಾ ಈ ದೇವಸ್ಥಾನವನ್ನು ತಲುಪಬಹುದಾಗಿದೆ. ವಾರ್ಷಿಕವಾಗಿ ಜರುಗುವ ಯಾತ್ರಾ ಮಹೊತ್ಸವದಲ್ಲಿ ಪಾಲ್ಗೊಳ್ಳಲು ಭಾರತದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ. ಸದಾಶಿವಗಡ ಬೋಟ್ ಜೆಟ್ಟಿಯಿಂದ ಫೆರ್ರಿಯ ಮೂಲಕ ಪ್ರವಾಸಿಗರು ಇಲ್ಲಿಗೆ ತಲುಪಬಹುದು.


Click it and Unblock the Notifications