ಕರೂರ್ ಸಣ್ಣ ಕೈಗಾರಿಕೆಗಳ ಉದ್ಯಮದಲ್ಲಿ ಹೆಸರುವಾಸಿಯಾಗಿದ್ದು, ಜವಳಿ ಹಾಗು ಹಿತ್ತಾಳೆ ವಸ್ತುಗಳ ತಯಾರಿಕೆಯಲ್ಲಿ ಪರಿಣಿತಿಯನ್ನು ಪಡೆದಿದೆ. ಹಲವಾರು ನಾರಿಗೆ ಸಂಬಂಧಿಸಿದ ಉತ್ಪನ್ನಗಳು ಇಲ್ಲಿ ಪ್ರಮುಖವಾಗಿ ದೊರೆಯುತ್ತವೆ. ಹತ್ತಿ ಬಟ್ಟೆಯ ಪರದೆಗಳಿಗು ಕೂಡ ಇದು ಪ್ರಸಿದ್ಧ. ಇವುಗಳಲ್ಲದೆ ಕರೂರ್ ನಲ್ಲಿ ಕೆಲವು ಹರಳುಗಳನ್ನೂ ಉತ್ಪಾದಿಸಲಾಗುತ್ತದೆ. ಅವುಗಳೆಂದರೆ, ಮೂನ್ ಸ್ಟೋನ್ಸ್, ಅಕ್ವಾಮರೈನ್ಸ್, ಜಾಸ್ಪರ್, ಫೆಲ್ಡ್ ಸ್ಪರ್ ಮತ್ತು ಕ್ವಾರ್ಟ್ಜ್. ಹೀಗಾಗಿ ಕರೂರ್ ಒಂದು ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ.


Click it and Unblock the Notifications