Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲಾ » ಆಕರ್ಷಣೆಗಳು » ಕರ್ನಾಲಾ ಪಕ್ಷಿಧಾಮ

ಕರ್ನಾಲಾ ಪಕ್ಷಿಧಾಮ, ಕರ್ನಾಲಾ

3

ಕರ್ನಾಲಾ ಪಕ್ಷಿಧಾಮವನ್ನು ನೋಡಿದವರು ಸ್ವರ್ಗವೇ ಧರೆಗಿಳಿದು ಬಂದಂತಿದೆ ಎಂದು ಹೇಳಿದರೆ ತಪ್ಪಿಲ್ಲ. ಕರ್ನಾಲಾ ಕೋಟೆಯ ಕೆಳಗೆ ಇರುವ ಈ ಪಕ್ಷಿಧಾಮವನ್ನು 1968 ರಲ್ಲಿ ಸ್ಥಾಪನೆ ಮಾಡಲಾಯಿತು ಮತ್ತು ಇದು ಎಲ್ಲಾ ತರಹದ ಪಕ್ಷಿಗಳಿಗೆ ನೆಲೆಯಾಗಿದೆ.

ಭಾರತದ 150 ಕ್ಕೂ ಹೆಚ್ಚಿನ ಪಕ್ಷಿ ಸಂತತಿಗಳ ಜೊತೆಗೆ ಹೊರದೇಶದ ಸುಮಾರು 37 ಪಕ್ಷಿ ಪ್ರಭೇದಗಳನ್ನು ಒಟ್ಟಿಗೆ ನೋಡುವ ಅವಕಾಶ ಇಲ್ಲಿ ನಮಗೆ ಒದಗುತ್ತದೆ. ಇಷ್ಟೊಂದು ಪಕ್ಷಿಗಳ ಕಲರವದಲ್ಲಿ ನಿಮ್ಮನ್ನು ನೀವು ಮರೆತರೆ ಅದರಲ್ಲಿ ವಿಶೇಷವೇನಿಲ್ಲ.

ಮೈಯಲ್ಲಿ ಚುಕ್ಕೆ ಇರುವ ಮರಕುಟಿಗ, ಬೂದು ಬಣ್ಣದ ಮಿನಿಮೆಟ್, ಪಾರಡೈಸ್ ಫ್ಲೈ ಕ್ಯಾಚರ್, ಕೆಂಪು ಕಿಬ್ಬೊಟ್ಟೆಯ ಪಿಕಳಾರ, ಮಡಿವಾಳ ಹಕ್ಕಿ, ರಾಬಿನ್ ಹಕ್ಕಿ ಮತ್ತು ರಾಕೆಟ್ ಕಾಜಾಣ ಹಕ್ಕಿ ಇಲ್ಲಿ ಕಂಡುಬರುವ ಕೆಲವು ಅಪರೂಪದ ಪಕ್ಷಿ ಸಂಕುಲವಾಗಿದೆ. ಗೊರವಂಕ ಮತ್ತು ಗೂಬೆಯನ್ನೂ ನಾವಿಲ್ಲಿ ಕಾಣಬಹುದು.

ಈ ಪಕ್ಷಿಧಾಮದ ಒಟ್ಟು ಪ್ರದೇಶ ಕಣ್ಣಿಗೆ ರಸದೌತಣ ನೀಡುತ್ತದೆ ಹಾಗೂ ಇದು ಪರಿಸರ ಸ್ನೇಹಿಯೂ ಆಗಿದೆ. ಈ ಸ್ಥಳದಲ್ಲಿ ಬಂದ ಯಾರ ಮುಖದಲ್ಲೂ ನಗು ಹಾಗು ಆನಂದ ಮಾಯವಾಗಲು ಸಾಧ್ಯವಿಲ್ಲ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed