ಪದುಂ ಎಂಬುದು ಪಾದಂ ಅಂತಲೂ ಜನಪ್ರಿಯವಾಗಿದೆ. ಕಾರ್ಗಿಲ್‌ನಿಂದ 240 ಕಿ.ಮೀ. ದೂರದಲ್ಲಿದೆ. ಜನ್ಸಕರ್ ತೆಹ್ಸಿಲ್‌ನ ಅತಿದೊಡ್ಡ ಪಟ್ಟಣ ಅನ್ನಿಸಿಕೊಂಡಿದೆ. ಹಿಂದಿನ ದಿನಗಳಲ್ಲಿ ಇದು ಜನ್ಸಕರ್ ನಲ್ಲಿ ಆಳ್ವಿಕೆಯಿದ್ದ ಸಂದರ್ಭದಲ್ಲಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಇಲ್ಲಿನ ಸ್ಥಳೀಯ ರಾಜನ 'ಮಣ್ಣಿನ ಪ್ಯಾಲೇಸ್' ಪ್ರಮುಖ ಆಕರ್ಷಣೆಯಾಗಿದೆ. ಒಂದು ಚಿಕ್ಕ ಆಶ್ರಮವೂ ಇದೆ. ಇನ್ನು ಇಲ್ಲಿನ ನದಿ ಸಮೀಪದಲ್ಲಿ 8ನೇ ಶತಮಾನದ ಕಲ್ಲಿನ ಕೆತ್ತನೆಯ ಮೂರ್ತಿಗಳು ಲಭ್ಯವಾಗಿವೆ. ಪಿಬಿತಿಂಗ್ ಹೆಸರಿನ ಚಿಕ್ಕ ಹಳ್ಳಿಯೊಂದಿದ್ದು, ಇದು ಗುಡ್ಡದ ಮೇಲೆ ಇದೆ. ಇಲ್ಲಿ ನಿಂತು ಅತ್ಯಾಕರ್ಷಕ ಬೆಟ್ಟಗಳನ್ನು ವೀಕ್ಷಿಸಬಹುದಾಗಿದ್ದು, ಅಪಾರ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯುತ್ತದೆ.


Click it and Unblock the Notifications