ಕಾರೈಕಾಲ್ ಮರಳಿನ ಬೀಚ್, ಬಹುಶಃ ದಕ್ಷಿಣ ತಮಿಳುನಾಡಿನಲ್ಲಿಯೇ ಕಾಣಬಹುದಾದ ಅತ್ಯಂತ ಸುಂದರ ಬೀಚ್ ಗಳಲ್ಲಿ ಒಂದಾಗಿದೆ. ಪ್ರವಾಸಿಗರು ಕಂಡರಿಯದ ಈ ಬೀಚ್, ನೀರಿನಲ್ಲಿ ಪ್ರೇಮಿಗಳಿಗೆ ಏಕಾಂತತೆಯಲ್ಲಿ ಮತ್ತು ಪ್ರಶಾಂತತೆಯನ್ನು ಒದಗಿಸುತ್ತದೆ. ಸಾರ್ವಜನಿಕರು ಸಾಗುವ ರಸ್ತೆ ಮಾರ್ಗವನ್ನು ಅರಸಲಾರ್ ನದಿಯುದ್ದಕ್ಕೂ 2 ಕಿ. ಮೀ ವರೆಗೆ ವಿಸ್ತರಿಸಲಾಗಿದೆ. ತನ್ನ ಜಲ ಕ್ರೀಡೆಗಳಿಗೆ ಹೆಸರುವಾಸಿಯಾಗಿರುವ ಬಂಗಾಳ ಕೊಲ್ಲಿಯ ಹಿನ್ನೀರಾದ ಅರಸಲಾರ್ ನದಿಯಲ್ಲಿ ಬೋಟಿಂಗ್ ಹೋಗಬಹುದು. ಹಾದುಹೋಕರಿಗೆ ದೋಣಿ ಕ್ಲಬ್, ಪ್ರವಾಸಿಗರಿಗಾಗಿ ಮೋಟಾರ್ ದೋಣಿಗಳು ಮತ್ತು ರೋವಿಂಗ್ ದೋಣಿಗಳನ್ನು ಒದಗಿಸಲಾಗುತ್ತದೆ.
ಅಲ್ಲದೇ ಇಲ್ಲಿ ಮಕ್ಕಳಿಗಾಗಿ ಮಕ್ಕಳ ಉದ್ಯಾನ, ಕೆಲವು ಬೀಚ್ ರೆಸ್ಟೋರೆಂಟ್ ಮತ್ತು ಟೆನ್ನಿಸ್ ಕೋರ್ಟ್ಗಳನ್ನು ಕೂಡ ಕಾಣಬಹುದು. ನೀವು ಬೀಚ್ ನ ಸೌಂದರ್ಯದ ಅನುಭವವನ್ನು ಪಡೆಯಲು ಸೂರ್ಯೋದಯ ಅಥವಾ ಸೂರ್ಯಾಸ್ತದ ಸಮಯದಲ್ಲಿ ಬೀಚ್ ಗೆ ಭೇಟಿ ನೀಡಿ ಕಣ್ತುಂಬಿಸಿಕೊಳ್ಳಬಹುದು.


Click it and Unblock the Notifications