Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಪೈತಾಲ್ ಮಾಲ

ಪೈತಾಲ್ ಮಾಲ, ಕಣ್ಣೂರು

1

ಕಣ್ಣೂರು ನಗರದಿಂದ ಸುಮಾರು 60 ಕಿ.ಮೀ. ದೂರದಲ್ಲಿ ಹಾಗೂ ಕೇರಳಾ-ಕರ್ನಾಟಕ ರಾಜ್ಯಗಳ ಗಡಿ ಪ್ರದೇಶದಲ್ಲಿರುವ ಪೈತಾಲ್ ಮಾಲ ತನ್ನ ನೈಸರ್ಗಿಕ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸುತ್ತದೆ. ಇದಕ್ಕೆ ವೈಟಲ್ ಮಾಲ ಎಂಬ ಹೆಸರೂ ಇದೆ. ಈ ಪ್ರದೇಶ ಸಮುದ್ರ ಮಟ್ಟಕ್ಕಿಮತ 4500 ಅಡಿ ಎತ್ತರದಲ್ಲಿದ್ದು ಹಸಿರು ಬೆಟ್ಟದ ಸಾಲುಗಳು ಪ್ರವಾಸಿಗರನ್ನು ಹಾಗೂ ಚಾರಣ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಿಸರ್ಗ ಪ್ರೇಮಿಗಳು ಹಾಗೂ ವನ್ಯಜೀವಿ ಪ್ರೇಮಿಗಳಿಗೆ ಉತ್ತಮ ಸ್ಥಳವಾಗಿರುವ ಪೈತಾಲ್ ಮಾಲ ಅನೇಕ ವಿಧವಾದ ಪ್ರಾಣಿ-ಪಕ್ಷಿಗಳು ಹಾಗೂ ಗಿಡ-ಮರಗಳನ್ನು ಹೊಂದಿದೆ. ಈ ಪ್ರದೇಶವು ಟ್ರೆಕ್ಕಿಂಗ್ ಪ್ರಿಯರಿಗೆ ಒಳ್ಳೆ ಸ್ಥಳ ಹಾಗೂ ಸುಮಾರು 6 ಕಿ.ಮೀ. ಚಾರಣ ಮಾಡಿದರೆ ಬೆಟ್ಟದ ಮೇಲ್ಭಾಗವನ್ನು ತಲುಪಬಹುದು. ದಿನೇ ದಿನೇ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುವುದು ಹೆಚ್ಚುತ್ತಾ ಇರುವುದನ್ನು ಗಮನಿಸಿರುವ ಸಂಬಂಧಪಟ್ಟ ಅಧಿಕಾರಿಗಳು ಪೈತಾಲ್ ಮಾಲನ್ನು ಹಿಲ್ ರಿಸಾರ್ಟ್ ಆಗಿ ಪರಿವರ್ತಿಸುವ ಆಲೋಚನೆಯಲ್ಲಿದ್ದಾರೆ.

ಇಲ್ಲಿನ ಹಸಿರು ಬೆಟ್ಟಗಳ ತುತ್ತತುದಿಯಲ್ಲಿ ನಿಂತು ಸುತ್ತಲು ನೋಡುವುದೇ ಒಂದು ರೋಮಾಂಚಕ ಅನುಭವ ಹಾಗೇ ಇದು ಛಾಯಾಗ್ರಾಕರಿಗೆ ತಮ್ಮ ಪ್ರತಿಭೆ ಪರೀಕ್ಷಿಸಿಕೊಳ್ಳಲು ಉತ್ತಮ ತಾಣ ಎನ್ನಬಹುದು. ಬೇಸಿಗೆಯಲ್ಲಿ ಪೈತಾಲ್ ಮಾಲಗೆ ಭೇಟಿ ನೀಡುವುದು ನಿಜಕ್ಕೂ ಸುಂದರ ಅನುಭವ, ಇಲ್ಲಿನ ತಂಪಾದ ಗಾಳಿ ಪ್ರವಾಸಿಗರಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಇಲ್ಲಿರುವ ಪುರಾತನ ಅರಮನೆ ವಿಠಾಲಕೋನ ಎಂಬ ಅಂದಿನ ಆದಿವಾಸಿ ನಾಯಕನಿಗೆ ಸೇರಿದ್ದು, ಇದು ಇಲ್ಲಿನ ಆಕರ್ಷಕ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed