Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಗುಂಡರ್ಟ್ ಬಂಗಲೆ

ಗುಂಡರ್ಟ್ ಬಂಗಲೆ, ಕಣ್ಣೂರು

1

ಕಣ್ಣೂರಿನಿಂದ 20 ಕಿ.ಮೀ.ಅಂತರದಲ್ಲಿರುವ ಗುಂಡರ್ಟ್ ಬಂಗಲೆ ಒಂದು ಪ್ರಸಿದ್ದ ಪಾರಂಪರಿಕ ಕಟ್ಟಡವಾಗಿದ್ದು ಪ್ರಮುಖ ಪ್ರವಾಸಿ ಆಕರ್ಷಣ ಕೇಂದ್ರವಾಗಿದೆ. ತಲಚೇರಿ ನಗರಕ್ಕೆ ಹತ್ತಿರದಲ್ಲಿರುವ ಇಲ್ಲಿಕುನ್ನೂರು ಎಂಬ ಸುಂದರವಾದ ಬೆಟ್ಟದ ಮೇಲೆ ಈ ಬಂಗಲೆ ಇದೆ. ಇದರ ಸಮೀಪದಲ್ಲೇ ನದಿ ಹರಿದು ಹೋಗಿರುವುದರಿಂದ ಈ ಪ್ರದೇಶದ ಸೌಂದರ್ಯ ಮತ್ತಷ್ಟು ಆಕರ್ಷಕವಾಗಿದೆ.

ಸಾಹಿತ್ಯ, ಶೈಕ್ಷಣಿಕ ಹಾಗೂ ಮಿಷನರಿ ಸೇವೆ ಮಾಡುತ್ತಿದ್ದ ಡಾ. ಹೆರ್ಮನ್ ಗುಂಡರ್ಟ್ ಅವರು 1839 ರಲ್ಲಿ ಈ ಬಂಗಲೆಯಲ್ಲಿ ನೆಲೆಸಿದ್ದರು. ಗುಂಡರ್ಟ್ ಎಂಬುವವರು ಜರ್ಮನಿಯ ಮಿಷನರಿ ಹಾಗೂ ತತ್ವಜ್ಞಾನಿ, ಅವರು ಮಲಯಾಳಂ-ಇಂಗ್ಲೀಷ್ ನಿಘಂಟನ್ನು ಮೊದಲು ಪ್ರಕಟಿಸಿದವರು. ಪ್ರಥಮ ಮಲಯಾಳಂ ದಿನ ಪತ್ರಿಕೆ 'ರಾಜ್ಯಸಮಾಚಾರಂ' ಹಾಗೂ 'ಪಾಶ್ಚಿಮೋದಯಂ' ಎಂಬ ಇತರ ನಿಯತಕಾಲಿಕಗಳನ್ನು ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ಇಲ್ಲಿ ವಾಸವಾಗಿದ್ದ ಗುಂಡರ್ಟ್ ಅವರ ನೆನೆಪಿನಲ್ಲಿ ಈ ಬಂಗಲೆಗೆ ಗುಂಡರ್ಟ್ ಬಂಗಲೆ ಎಂಬ ಹೆಸರು ಬಂದಿದ್ದು ಈಗ ಈ ಬಂಗಲೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಕೇತವಾಗಿ ಗುರುತಿಸಲ್ಪಟ್ಟಿದೆ. ಈ ಬಂಗಲೆಯ ಸಮೀಪದಲ್ಲೇ ಗುಂಡರ್ಟ್ ಮೆಮೋರಿಯಲ್ ಚರ್ಚ್ ಹಾಗೂ ನೆಟ್ಟೂರು ಟೆಕ್ನಿಕಲ್ ಟ್ರೇನಿಂಗ್ ಇನ್ಸ್ಟಿಟ್ಯೂಟ್ (ಎನ್.ಟಿ.ಟಿ.ಎಫ್)ಇದೆ. ಆಂಗ್ಲ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿರುವ ಈ ಬಂಗಲೆ ಅತ್ಯಂತ ಆಕರ್ಷಣೀಯ ಹಾಗೂ ಇದರ ಸುತ್ತಲಿನ ಪ್ರದೇಶ ಕಣ್ಸೇಳೆಯುವ ಮನನೋಹಕ ಸೌಂದರ್ಯವನ್ನು ಹೊಂದಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat