ಚಾರಣ, ಕಂಗ್ರಾ

ಕಂಗ್ರಾದಲ್ಲಿ ಚಾರಣ ಕೈಗೊಳ್ಳುವುದೆ ಒಂದು ಅವಿಸ್ಮರಣೀಯವಾದ ಅನುಭವವಾಗಿದೆ. ಇಲ್ಲಿರುವ ಹಿಮಚ್ಛಾದೀತ ಇಳಿಜಾರುಗಳಲ್ಲಿ ಚಾರಣದ ಮಜಾ ಅನುಭವಿಸಿದವರಿಗೆ ಗೊತ್ತು. ಕಂಗ್ರಾದಲ್ಲಿ ಸವಾಲೆನಿಸುವ ಹಲವಾರು ಚಾರಣದ ಹಾದಿಗಳು ಇದ್ದು, ಅವುಗಳು ಚಾರಣಿಗರನ್ನು ಶಿಖರದ ತುದಿಗಳಿಗೆ, ಬಂಡೆಯನ್ನು ಕೊರೆದು ಮಾಡಲಾಗಿರುವ ದೇವಾಲಯಗಳಿಗೆ ಮತ್ತು ಕಯೆರಿ ಕೆರೆಗೆ ತಲುಪಿಸುತ್ತವೆ. ಅಲ್ಲದೆ ಇಲ್ಲಿ ಚಾರಣಿಗರು ಸುಂದರವಾದ ಚಂಬಾ ಕಣಿವೆಗೆ ಚಾರಣ ಕೈಗೊಳ್ಳಬಹುದು. ಮಿಂಕಿಯನಿ ಪಾಸ್ ಮತ್ತು ಲಾಕಾ ಪಾಸ್ ಚಾರಣ ಅಥವಾ ಇಂದೆರ್ ಹರ ಚಾರಣವು ಕಂಗ್ರಾದ ಪ್ರಸಿದ್ಧ ಚಾರಣ ಯಾತ್ರೆಯಾಗಿದೆ. ಈ ಚಾರಣಗಳು ಧರ್ಮಶಾಲದಿಂದ ಆರಂಭವಾಗಿ ಮ್ಯಾಕ್ ಲಿಯೊಡ್ ಗಂಜ್‍ನಲ್ಲಿ ಅಂತ್ಯಗೊಳ್ಲುತ್ತವೆ. ಇಲ್ಲಿ ಧರ್ಮಶಾಲ-ತಲಂಗ್ ಪಾಸ್, ಧರ್ಮಶಾಲ-ಲಾಕಾ ಪಾಸ್, ಮ್ಯಾಕ್ ಲಿಯೊಡ್ ಗಂಜ್-ಮಿಂಕಿಯನಿ ಪಾಸ್-ಚಂಬಾ , ಬೈಜ್‍ನಾಥ್-ಪಾರೈ ಜೊಟ್ ಮತ್ತು ಭೀಮ್ ಗಸುತ್ರಿ ಪಾಸ್ ಎಂಬ ಪ್ರಸಿದ್ಧ ಚಾರಣದ ಹಾದಿಗಳಿವೆ.

Please Wait while comments are loading...