ಸಮುದ್ರ ಮಟ್ಟದಿಂದ 15000 ಅಡಿ ಎತ್ತರದಲ್ಲಿರುವ ಚಾಕ ಸೂಕ್ತವಾದ ಗಿರಿ ಶೃಂಗ. ಟ್ರೆಕ್ಕಿಂಗ್ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಜಾಗವಾಗಿದ್ದು ಬೆಟ್ಟವನ್ನು ಏರುವುದಕ್ಕೆ ಸುಮಾರು 2-3 ತಾಸು ತಗುಲುತ್ತದೆ ಮತ್ತು ಇಳಿಯುವುದಕ್ಕೆ 2 ತಾಸು ಖರ್ಚಾಗುತ್ತದೆ. ಕಲ್ಪಾದಲ್ಲಿರುವ ನೀರಿನ ಕಾಲುವೆಯ ಎರಡೂ ಬದಿಯಿಂದ ಪ್ರವಾಸಿಗರು ಇಲ್ಲಿ ಸ್ಥಳೀಯ ಮಾರ್ಗದರ್ಶಕರನ್ನು ಬಾಡಿಗೆಗೆ ಪಡೆಯಬಹುದು. ಟ್ರೆಕ್ಕಿಂಗ್ ಮಾಡುವವರು ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬೇಗನೇ ತಮ್ಮ ಪ್ರಯಾಣ ಆರಂಭಿಸುವುದು ಉತ್ತಮ. ಹಗಲು ಹೊತ್ತು ಪ್ರಯಾಣಿಸುವವರಿಗೆ ಇಲ್ಲೊಂದು ಸುಂದರವಾದ ಸರೋವರ ಮತ್ತು ಕಣಿವೆ ಕಾಣಸಿಗುತ್ತದೆ. ಇದು ಚಾಕ ಮತ್ತು ಕಲ್ಪದ ನಡುವಿನ ವಿಶ್ರಾಂತಿ ತಾಣದಂತೆ ಬಳಸಲ್ಪಡುತ್ತದೆ.


Click it and Unblock the Notifications