ಹಂತ ಹಂತಗಳನ್ನು ಹೊಂದಿರುವ ನಯನ ಮನೋಹರವಾದ ಜಲಪಾತಕ್ಕೆ ರಬಂದರ್ಹ್ (Rabandarh) ಆಶ್ರಯತಾಣವಾಗಿದ್ದು, ಇದು ದಟ್ಟ ಹಸಿರು ಕಾನನದ ಮಧ್ಯೆ ಇದೆ. ನಗರದ ಗಿಜಿಗುಟ್ಟುವ, ತಲೆಚಿಟ್ಟು ಹಿಡಿಸುವ ಜನಜಂಗುಳಿಯಿಂದ ದೂರವಿರುವ ರಬಂದರ್ಹ್ (Rabandarh), ಒಂದು ಪ್ರಕೃತಿ ಮನೋಹರ ಮತ್ತು ಪ್ರಶಾಂತವಾದ ಪ್ರದೇಶವಾಗಿದ್ದು, ಇಲ್ಲಿ ನಿಮಗೆ ಜಲಪಾತದ ಮಾರ್ದನಿಯನ್ನು ಹೊರತು ಪಡಿಸಿ ಬೇರೆ ಯಾವುದೇ ಧ್ವನಿಯು ಕೇಳಿಸದು. ಈ ಸ್ಥಳವನ್ನು ತಲುಪಲು, ನೀವು ಧೂಳುಮಯ ರಸ್ತೆಗಳ ಮೂಲಕ ಹಾದುಹೋಗಬೇಕಾಗುತ್ತದೆ. ರಬಂದರ್ಹ್ (Rabandarh) ನ್ನು ತಲುಪಲು ಇಷ್ಟೆಲ್ಲಾ ಸಂಪರ್ಕದ ಕೊರತೆ ಇದ್ದರೂ ಕೂಡ, ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಜನರು ಇಲ್ಲಿಗೆ ಆಗಮಿಸುತ್ತಾರೆ. ಇದೊಂದು ಬಹು ಜನಪ್ರಿಯವಾದ ವಿಹಾರ ತಾಣವಾಗಿದೆ. ಸಾಹಸಪ್ರಿಯರು ಚಾರಣದ ಉದ್ದೇಶದಿಂದಲೂ ಕೂಡ ಇಲ್ಲಿಗೆ ಬರುತ್ತಾರೆ.
ದಿವ್ಯ ಪ್ರಶಾಂತತೆ ಮತ್ತು ಏಕಾಂತತೆಯನ್ನು ರಬಂದರ್ಹ್ (Rabandarh) ನ ಸುತ್ತಮುತ್ತಲೂ ಪ್ರಸಾದಿಸುವ ಪ್ರಕೃತಿಯ ಸೊಬಗಿನ ಕಾರಣಕ್ಕಾಗಿ, ರಬಂದರ್ಹ್ (Rabandarh), ಕಲಾಹಂಡಿಯ ಒಂದು ಪ್ರಮುಖ ಪ್ರವಾಸೀ ಆಕರ್ಷಣೆಯಾಗಿದೆ. ಚಳಿಗಾಲದ ಅವಧಿಯಲ್ಲಿ, ಹವಾಮಾನವು ತಂಪಾಗಿದ್ದು, ಜಲಪಾತದ ನೀರು ತಣ್ಣಗಿರುವಾಗ, ಅನೇಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.


Click it and Unblock the Notifications