Search
  • Follow NativePlanet
Share
ಮುಖಪುಟ » ಸ್ಥಳಗಳು » ಕಲಾಹಂಡಿ » ಆಕರ್ಷಣೆಗಳು » ಗುಡಹಂಡಿ

ಗುಡಹಂಡಿ, ಕಲಾಹಂಡಿ

1

ಗುಡಹಂಡಿಯು ನಂಬಲಸಾಧ್ಯವಾದ ಪ್ರಕೃತಿ ಮನೋಹರವಾದ ತಾಣವಾಗಿದ್ದು, ಇದು ಕಲಾಹಂಡಿಯ ಮೂರು ಬೆಟ್ಟಗಳ ಸಂಗಮದಿಂದ ಕೂಡಿದೆ.  ಕೇವಲ ಪ್ರಕೃತಿ ಸಮೃದ್ಧಿಯಷ್ಟೇ ಅಲ್ಲದೇ, ಗುಡಹಂಡಿಯು ಪೂರ್ವೇತಿಹಾಸಕ್ಕೆ ಸೇರಿರುವುದಾಗಿ ನಂಬಲಾದ ಅನೇಕ ಸಾಕ್ಷ್ಯಾಧಾರಗಳ ತವರೂರೂ ಸಹ ಆಗಿದೆ.  ಇಲ್ಲಿನ ಬೆಟ್ಟಗಳಲ್ಲಿರುವ ಗುಹೆಗಳು, ತಮ್ಮ ಮೇಲ್ಮೈ ಮೇಲೆ ಅನೇಕ ಚಿತ್ರಗಳನ್ನು ಹೊಂದಿವೆ.  ಈ ಚಿತ್ತಾರಗಳನ್ನು ಇಂಡಸ್ ಕಣಿವೆಯ ನಾಗರೀಕತೆಯ ಕಾಲದಲ್ಲಿ ಚಿತ್ರಿಸಲಾಗಿತ್ತು ಎಂದು ನಂಬಲಾಗಿದೆ.  ಉತ್ತರ ದಿಕ್ಕಿನ ತುತ್ತತುದಿಯಲ್ಲಿರುವ ಒಂದು ಗುಹೆಯನ್ನು ಹೊರತುಪಡಿಸಿ, ಉಳಿದೆಲ್ಲಾ ಗುಹೆಗಳು ಹೆಚ್ಚು ಕಡಿಮೆ ಒಂದೇ ಗಾತ್ರದ್ದಾಗಿವೆ. ಗುಹೆಗಳ ಪ್ರವೇಶದ್ವಾರದಲ್ಲಿರುವ ಕೆಂಪು ಮತ್ತು ಕಪ್ಪು ವರ್ಣದ ಚಿತ್ರಗಳು ವೀಕ್ಷಕರನ್ನು ಸುಲಭವಾಗಿ ಮೋಡಿ ಮಾಡುತ್ತವೆ.

ಬೆಟ್ಟಗಳ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ತಾಗಿಕೊಂಡಂತೆ ಇರುವ ಕಣಿವೆಯು ಹಚ್ಚ ಹಸುರಿನಿಂದ ಸಮೃದ್ಧವಾಗಿದ್ದು ಇದು ಗುಡಹಂಡಿಯ ಬೆಟ್ಟಗಳ ಸೌoದರ್ಯವನ್ನು, ಸೊಬಗನ್ನು ಇನ್ನಷ್ಟು ಹೆಚ್ಚು ಮಾಡಿದೆ.  ಬೆಹೆರ ಎಂದು ಕರೆಯಲ್ಪಡುವ ಸಣ್ಣ ನದಿಯೊಂದು ಈ ಬೆಟ್ಟಗಳ ಮೂಲಕ ಹರಿಯುತ್ತಿದ್ದು, ಈ ನದಿಗೆ ಕಟ್ಟಲಾಗಿದ್ದ ಪುರಾತನ ಅಣೆಕಟ್ಟೊಂದು ಇಂದಿಗೂ ಇದೆ.  ಈ ಅಣೆಕಟ್ಟನ್ನು ಭೀಮಸೇನನು ಕಟ್ಟಿದನೆಂದು ನಂಬಲಾಗಿದೆ.  ಈ ಪ್ರದೇಶದ ನಿವಾಸಿಗಳಿಗೆ ಗುಡಹಂಡಿಯು ಒಂದು ಅಪ್ಯಾಯಮಾನವಾದ ವಿಹಾರದ ತಾಣವಾಗಿದೆ ಮತ್ತು ಪ್ರವಾಸಿಗರಿಗೆ ಚಳಿಗಾಲದಲ್ಲಿ ಮುದ ನೀಡುವ ತಾಣವಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed