ಕರ್ಮನಾಶ ನದಿಯು ಗಂಗಾ ನದಿಯ ಒಂದು ಉಪನದಿಯಾಗಿದೆ. ಇದು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಹರಿಯುತ್ತದೆ. ಕರ್ಮನಾಶ ಎಂಬುದರ ಪದಶಃ ಅರ್ಥ ಧಾರ್ಮಿಕ ಶ್ರೇಷ್ಠತೆಯ ನಿರ್ಮೂಲಕ ಎಂಬುದಾಗಿದೆ. ಈ ನದಿಯ ಜೊತೆಗೆ ಹತ್ತು ಹಲವು ಕತೆಗಳು ಸಂಬಂಧ ಹೊಂದಿವೆ. ಈ ನದಿಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಲತೀಫ್ ಶಾ ಬಂಧ್ ಹಾಗೂ ನೂವಾಗರ್ ಅಣೆಕಟ್ಟು.
ಗ್ರಾಂಡ್ ಟ್ರಂಕ್ ರಸ್ತೆ ಕೂಡ ಇದೇ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆಯ ಮೇಲೆ ಹಾದು ಹೋಗುತ್ತದೆ. ರಾಜಾ ನಲ್ ಕಾ ತಿಲಾ ಎಂಬಲ್ಲಿ ಕಬ್ಬಿಣದ ಕರಕುಶಲ ವಸ್ತುಗಳನ್ನು ಈ ನದಿಯ ಕಣಿವೆಯಲ್ಲಿ ಪತ್ತೆ ಹಚ್ಚಲಾಗಿದೆ. ಇವುಗಳು ಭಾರತದ ಇತಿಹಾಸವನ್ನು ತಿಳಿಯುವಲ್ಲಿ ಹಾಗೂ ಶಿಲಾಯುಗದ ಬಗೆಗಿನ ನಿರ್ಧಾರಗಳಿಗೆ ಸಹಕಾರಿಯಾಗಿವೆ.


Click it and Unblock the Notifications