Search
  • Follow NativePlanet
Share
ಮುಖಪುಟ » ಸ್ಥಳಗಳು » ಕೈಮೂರ್ » ಹವಾಮಾನ

ಕೈಮೂರ್ ಹವಾಮಾನ

ಕೈಮೂರ್ ಎಲ್ಲಾ ಋತುಮಾನಗಳನ್ನೂ ಬಹಳ ತೀವ್ರವಾಗಿ ಅನುಭವಿಸುತ್ತದೆ. ಇದು ಪ್ರವಾಸಿಗಳ ಯೋಜನೆಗಳನ್ನು ಬುಡಮೇಲು ಮಾಡುವ ಸಾಧ್ಯತೆಗಳಿವೆ. ಅಕ್ಟೋಬರ್ ನಿಂದ ಮಾರ್ಚ್  ತಿಂಗಳ ಕಾಲ ಇಲ್ಲಿನ ಭೇಟಿಗೆ ಸರಿಯಾದ ಸಮಯ. ಈ ಅವಧಿಯಲ್ಲಿ ಅತಿ ಕಡಿಮೆ ವಾಯುಗುಣ ವೈಪರಿತ್ಯಗಳನ್ನು ಕಾಣಬಹುದಾಗಿದೆ.

ಬೇಸಿಗೆಗಾಲ

ಈ ಅವಧಿಯ ತಾಪಮಾನ ಬಹಳ ಹೆಚ್ಚಾಗಿ ನಿಮ್ಮ ಭೇಟಿಯನ್ನು ತ್ರಾಸದಾಯಕವನ್ನಾಗಿಸಬಹುದು. ಮಾರ್ಚ್ ನಿಂದ ಮೇ ತನಕದ ಅವಧಿ ಇಲ್ಲಿನ ತೀವ್ರ ಬೇಸಿಗೆಯ ಅವಧಿಯಾಗಿದೆ. ಈ ಅವಧಿಯಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದರೆ ಆಶ್ಚರ್ಯವೇನಿಲ್ಲ.

ಮಳೆಗಾಲ

ಮಳೆಗಾಲವೂ ಬೇಸಗೆಯಂತೆ ಬಹಳ ತೀವ್ರವಾಗಿರುತ್ತದೆ. ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್ ತಿಂಗಳ ತನಕ ಮುಂದುವರಿಯುತ್ತದೆ.

ಚಳಿಗಾಲ

ಈ ಅವಧಿಯಲ್ಲಿ ಕೈಮೂರ್ ಬಹಳ ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಆದರೂ ತಾಪಮಾನ 4 ಡಿಗ್ರಿ ಸೆಲ್ಸಿಯಸ್ ತನಕ ಬರುವ ಸಾಧ್ಯತೆಗಳಿವೆ. ಡಿಸೆಂಬರ್ ನಿಂದ ಫೆಬ್ರವರಿ ಇಲ್ಲಿನ ಚಳಿಗಾಲದ ಅವಧಿಯಾಗಿದೆ. ಈ ಅವಧಿಯಲ್ಲೂ ಮಳೆಯಾಗುವ ಸಾಧ್ಯತೆಗಳಿದೆ.