ಚೈನ್ಪುರ್ ಒಂದು ದೊಡ್ಡ ಗ್ರಾಮವಾಗಿದ್ದು ಹಲವು ಉತ್ಸವಗಳ ನೆಲೆಬೀಡಾಗಿದೆ. ಕಾಳಿ ಪೂಜಾ, ಹೋಳಿ, ದುರ್ಗಾ ಪೂಜಾ ಇಲ್ಲಿನ ಪ್ರಮುಖ ಹಬ್ಬಗಳಾಗಿವೆ. ಇವುಗಳ ಜೊತೆಗೆ ಜನ್ಮಾಷ್ಟಮಿ, ಶಿವರಾತ್ರಿ, ಹನುಮಾನ್ ಜಯಂತಿ, ಸಮಾ ಚಕೆವಾ, ಛತ್, ಚೌರ್ ಚನರೆ ಕೂಡ ಬಹಳ ಅದ್ದೂರಿಯಾಗಿ ಆಚರಿಸುವ ಹಬ್ಬಗಳಾಗಿವೆ. ನೀಲಕಂಠ ಮಂದಿರ ಶಿವ ದೇವರಿಗೆ ಅರ್ಪಿಸಲಾದ ಅತ್ಯಂತ ಹಳೆಯ ಒಂದು ದೇವಾಲಯವಾಗಿದ್ದು ಇಲ್ಲಿನ ಇನ್ನೊಂದು ಪ್ರಮುಖ ಪೂಜಾ ಸ್ಥಳ. ಇದು ವಾಸ್ತುಶಿಲ್ಪದ ಸೌಂದರ್ಯಕ್ಕೂ ಬಹಳ ಹೆಸರುವಾಸಿ. ಕಾಳಿ ಮಂದಿರ್, ದುರ್ಗಾ ಮಂದಿರ್, ವಿಷ್ಣು ಮಂದಿರ್, ರಾಧಾ ಕೃಷ್ಣ ಕುಟಿ, ಬ್ರಹ್ಮ್ ಬಾಬಾ ಸ್ಥಾನ್ ಇತರೆ ಪ್ರಮುಖ ದೇವಾಲಯಗಳಾಗಿವೆ. ಕಾಳಿ ಪೂಜಾ ದ ಅವಧಿಯಲ್ಲಿ ಪ್ರತಿ ವರ್ಷ ಇಲ್ಲಿ ಹಬ್ಬದ ವಾತಾನರಣ ಇರುತ್ತದೆ.


Click it and Unblock the Notifications