Search
  • Follow NativePlanet
Share
ಮುಖಪುಟ » ಸ್ಥಳಗಳು» ಸಾರನಾಥ್

ಸಾರನಾಥ : ಬುದ್ಧನು ಮಾಡಿದ ಮೊದಲ ಧರ್ಮೋಪದೇಶ

23

ಸಾರನಾಥ ಉತ್ತರಪ್ರದೇಶದ ವಾರಣಾಸಿ ಹತ್ತಿರವಿರುವ ಒಂದು ಸಣ್ಣ ಹಳ್ಳಿ. ಇಲ್ಲಿರುವ ಜಿಂಕೆ ವನ (ಡೀರ್ ಪಾರ್ಕ್)ದಿಂದಾಗಿ ಈ ಸ್ಥಳ ಪ್ರಖ್ಯಾತಿ ಪಡೆದಿದೆ. ಏಕೆಂದರೆ ಇಲ್ಲಿಯೆ ಮೊದಲ ಬಾರಿಗೆ ಗೌತಮ ಬುದ್ಧನು ಧರ್ಮೋಪದೇಶ ಮಾಡಿದನು ಎನ್ನಲಾಗಿದೆ. ಬೌದ್ಧ ಮತದ ಬೇರನ್ನು ಹೊಂದಿರುವುದರಿಂದ ಸಾರನಾಥ ಭಾರತದ ನಾಲ್ಕು ಮೊದಲ ತೀರ್ಥಯಾತ್ರಾ ತಾಣದಲ್ಲಿ ಒಂದು ಎನ್ನಲಾಗಿದೆ. ಇಲ್ಲಿ ಭಾರತದ ಮಹಾನ್ ಚಕ್ರವರ್ತಿ ಅಶೋಕ ಆಳ್ವಿಕೆಯ ಕಾಲದಲ್ಲಿ ಅನೇಕ ಸ್ತೂಪ ಗಳನ್ನು ಕಟ್ಟಿಸಿದನು. ಅದರಲ್ಲಿ ಪ್ರಖ್ಯಾತಿ ಪಡೆದ ಅಶೋಕ ಸ್ತೂಪ ಸಾರನಾಥದಲ್ಲಿಯೇ ಇದೆ. ಈ ಅಶೋಕ ಸ್ತೂಪದಲ್ಲಿರುವ ನಾಲ್ಕು ಸಿಂಹಗಳು ನಮ್ಮ ರಾಷ್ಟ್ರ ಲಾಂಛನವಾಗಿದೆ. ಈ ಸ್ತೂಪದಲ್ಲಿರುವ ಚಕ್ರವು ನಮ್ಮ ರಾಷ್ಟ್ರ ದ್ವಜದ ಮಧ್ಯದಲ್ಲಿ ಚಕ್ರದ ರೂಪದಲ್ಲಿ ಬಿಂಬಿತವಾಗಿದೆ.

ಹಲವಾರು ಉತ್ಖನನಗಳನ್ನು  1907 ರಿಂದ ಕೈಗೊಳ್ಳಲಾಯಿತು, ಮತ್ತು ಅನೇಕ ಪುರಾತನ ಸ್ಮಾರಕಗಳು ಮತ್ತು ರಚನೆಗಳು ಉತ್ತರ ಭಾರತದಲ್ಲಿ ಬೌದ್ಧ ವಿಕಸನದ ಮೇಲೆ ಬೆಳಕು ಚೆಲ್ಲಿವೆ.

ಸಾರನಾಥ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಸಾರನಾಥವು ಅನೇಕ ಬೌದ್ಧ ಸ್ಮಾರಕಗಳು ಮತ್ತು ರಚನೆಗಳಿಗೆ ಹೆಸರುವಾಸಿಯಾಗಿದೆ ಅವುಗಳಲ್ಲಿ ಕೆಲವು ಕ್ರಿ,ಪೂ 2 ನೆ ಶತಮಾನದ ಕಾಲದವು ಎಂದು ಕೂಡ ಹೇಳಲಾಗಿದೆ. ಈ ಹಳ್ಳಿಯು ಬೌದ್ಧ ಯಾತ್ರಿಕರಿಗೆ, ಪ್ರವಾಸಿಗರಿಗೆ, ಇತಿಹಾಸಕಾರರಿಗೆ, ಪುರಾತತ್ವತಜ್ಞರಿಗೆ ಮತ್ತಿತರೆ ಸ್ಮಾರಕಗಳ ಮತ್ತು ರಚನೆಗಳ ಮೇಲಿರುವ ಕೆತ್ತನೆಗಳ ಪ್ರಾಚೀನ ಲಿಪಿಗಳನ್ನು ಅಧ್ಯಯನ ಮಾಡಲು ಬರುವವರಿಗೆ ಹೆಸರುವಾಸಿಯಾಗಿದೆ. ಇಲ್ಲಿರುವ ಜಿಂಕೆ ಉದ್ಯಾನವನಕ್ಕೂ ಕೂಡ ಸಾಕಷ್ಟು ಪ್ರವಾಸಿಗರು ಬರುತ್ತಾರೆ ಇದು ಬುದ್ಧನು ಮೊದಲ ಬಾರಿಗೆ ಧರ್ಮ ಬೋಧನೆ ಮಾಡಿದ ಸ್ಥಳವಾಗಿದೆ. ಜಿಂಕೆ ಪಾರ್ಕ್ ನಲ್ಲಿರುವ ಧಮೇಕ ಸ್ತೂಪದ ಕೆಳಗೆ ಕುಳಿತು ಮೊದಲ ಬಾರಿಗೆ ಬುದ್ಧ ಅಷ್ಟ ಮಾರ್ಗವನ್ನು ಬೋಧಿಸಿದ ಎನ್ನಲಾಗುತ್ತದೆ.

ಸಾರನಾಥದಲ್ಲಿ ಇತರ ಸ್ತೂಪಗಳು ಕೂಡ ಇವೆ,ಇಲ್ಲಿ ಬುದ್ಧನ ಮೂಳೆಗಳನ್ನು ಹೊಂದಿರುವ ಚೌಕಂಡಿ ಸ್ತೂಪ ಹೆಸರುವಾಸಿಯಾಗಿದೆ. ಪುರಾತತ್ವ ಕಾಲದಲ್ಲಿ ಅಶೋಕ ಸ್ತಂಭ ಸೇರಿ ಸಾಕಷ್ಟು ಸ್ಮಾರಕಗಳನ್ನು ಇಲ್ಲಿ ಕೆತ್ತಲಾಗಿದೆ. ಸಾರನಾಥ ವಸ್ತುಸಂಗ್ರಹಾಲಯವು ಉತ್ಖನನ ಕಾಲದಲ್ಲಿ ಪ್ರಾರಂಭವಾಯಿತು ಎನ್ನಲಾಗಿದೆ. 1931 ರಲ್ಲಿ ಮಹಾ ಬೋಧಿ ಸೊಸೈಟಿಯು ಮುಳಗಂಧ ಕುಟಿ ವಿಹಾರವನ್ನು ಪ್ರಾರಂಭಿಸಿತು.ಇಲ್ಲಿ ಥಾಯ್ ಕುಟೀರ ಮತ್ತು ಕಾಗ್ಯು ಟಿಬೆಟ್ ಸನ್ಯಾಸಿ ಕುಟೀರ ಕೂಡ ಇವೆ.

ತಲುಪುವುದು ಹೇಗೆ ?

ಸಾರನಾಥ ರಸ್ತೆ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು.

ಸಾರನಾಥವನ್ನು ತಲುಪಲು ಉತ್ತಮ ಕಾಲ

ನವೆಂಬರ್ ನಿಂದ ಮಾರ್ಚ ಸಾರನಾಥವನ್ನು ತಲುಪಲು ಉತ್ತಮ ಕಾಲ.ಈ ಸಮಯದಲ್ಲಿ ವಾತಾವರಣ ಉತ್ತಮ ಮತ್ತು ಆಹ್ಲಾದಕರವಾಗಿರುತ್ತದೆ.ಬೇಸಿಗೆ ಸಮಯದಲ್ಲಿ ಇಲ್ಲಿ ವಾತಾವರಣ ತುಂಬಾ ಒಣ ಮತ್ತು ಬಿಸಿಲಿನಿಂದ ಕೂಡಿರುತ್ತದೆ.

ಸಾರನಾಥ್ ಪ್ರಸಿದ್ಧವಾಗಿದೆ

ಸಾರನಾಥ್ ಹವಾಮಾನ

ಉತ್ತಮ ಸಮಯ ಸಾರನಾಥ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸಾರನಾಥ್

  • ರಸ್ತೆಯ ಮೂಲಕ
    ವಾರಣಾಸಿಯಿಂದ ಬಸ್ಸಿನ ಸಂಪರ್ಕವಿದೆ. ಅಥವಾ ಇಲ್ಲಿಂದ ಟಾಕ್ಸಿ ,ಅಟೋ ಮೂಲಕ ಕೂಡ ಸಾರನಾಥ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣವೆಂದರೆ ವಾರಣಾಸಿ. ವಾರಣಾಸಿ ರೈಲು ನಿಲ್ದಾಣ ಕೇವಲ 6 ಕಿ ಮೀ ಅಂತರದಲ್ಲಿದೆ ಮತ್ತು ಈ ನಿಲ್ದಾಣ ಇತರ ಮುಖ್ಯ ನಗರಗಳಾದ ದೆಹಲಿ, ಮುಂಬೈ, ಕೊಲ್ಕತ್ತಾ ಗಳಿಗೆ ಸಂಪರ್ಕ ಹೊಂದಿದೆ. ವಾರಣಾಸಿಯಿಂದ ನೀವು ಬಸ್ಸು ಅಥವಾ ಟಾಕ್ಸಿ ಮೂಲಕ ಸಾರನಾಥವನ್ನು ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಾರನಾಥದಿಂದ 24 ಕಿ.ಮೀ ಅಂತರದಲ್ಲಿರುವ ವಾರಣಾಸಿ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಅಲ್ಲಿಂದ ನೀವು ಟಾಕ್ಸಿ ಅಥವಾ ಬಸ್ಸಿನ ಮೂಲಕ ಸಾರನಾಥ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City