ನಂದಾ ದೇವಿ ರಾಷ್ಟ್ರೀಯ ಉದ್ಯಾನ, ಜೋಶಿಮಠ

ಮುಖಪುಟ » ಸ್ಥಳಗಳು » ಜೋಶಿಮಠ » ಆಕರ್ಷಣೆಗಳು » ನಂದಾ ದೇವಿ ರಾಷ್ಟ್ರೀಯ ಉದ್ಯಾನ

ಜೋಶಿಮಠದಿಂದ 24 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಾ ದೇವಿ ರಾಷ್ಟ್ರೀಯ ಉದ್ಯಾನವು ಒಂದು ಪ್ರಖ್ಯಾತ ಪ್ರವಾಸಿ ಆಕರ್ಷಣೆ. ಈ ಪ್ರದೇಶದ ಎರಡನೆ ಅತಿ ಎತ್ತರದ ನಂದಾ ದೇವಿ ಪರ್ವತ ಶ್ರೇಣಿಗಳಿಂದ ಸುತ್ತುವರಿದಿರುವ ಈ ರಾಷ್ಟ್ರೀಯ ಉದ್ಯಾನವು 630 ಚ್.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ.

ಈ ರಾಷ್ಟ್ರೀಯ ಉದ್ಯಾನವನ್ನು 1988 ರಲ್ಲಿ 'ವಿಶ್ವ ಪಾರಂಪರಿಕ ತಾಣ' ಎಂದು ಯುನೈಟೆಡ್ ನೇಷನ್ಸ್ ಎಜುಕೇಷನಲ್, ಸೈಂಟಿಫಿಕ್ ಆಂಡ್ ಕಲ್ಚರಲ್ ಆರ್ಗನೈಸೆಷನ್ (ಯುನೆಸ್ಕೊ) ಘೋಷಿಸಿತು. ಇನ್ನೊಂದು ಸಂಗತಿಯೆಂದರೆ ಈ ಉದ್ಯಾನವು, ವೆಸ್ಟರ್ನ್ ಹಿಮಾಲಯಾಸ್ ನ ಎಂಡೇಮಿಕ್ ಬರ್ಡ್ ಎರಿಯಾ (EBA) ದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಉದ್ಯಾನದಲ್ಲಿ ಹಿಮಚಿರತೆ, ಹಿಮಾಲಯದ ಕಪ್ಪು ಕರಡಿ, ಸೆರೋವ್, ಕಂದು ಕರಡಿ, ರುಬಿ ಥ್ರೋಟ್, ಭರಲ್, ಲಂಗೂರ್, ಗ್ರೊಸ್ ಬೀಕ್ಸ್, ಹಿಮಾಲಯನ್ ಮಸ್ಕ್ ಡೀರ್ ಮತ್ತು ಹಿಮಾಲಯನ್ ತಾಹ್ರ್ ಗಳನ್ನು ನೋಡಬಹುದಾಗಿದೆ.

ಸುಮಾರು 100 ಪ್ರಭೇದದ ಹಕ್ಕಿಗಳಿಗೆ ಈ ಉದ್ಯಾನವು ಒಂದು ನೈಸರ್ಗಿಕ ಆವಾಸ ಸ್ಥಾನವಾಗಿದೆ. ಸಾಮಾನ್ಯವಾಗಿ ಇಲ್ಲಿ ಕಾಣಬಹುದಾದ ಪಕ್ಷಿಗಳೆಂದರೆ, ಆರೇಂಜ್ ಬಣ್ಣದ ಬುಷ್ ರಾಬಿನ್, ನಿಲಿ ಮುಂಭಾಗದ ರೆಡ್ ಸ್ಟಾರ್ಟ್, ಹಳದಿ ಹೊಟ್ಟೆಯ ಫ್ಯಾನ್ ಟೇಲ್ ಫ್ಲೈ ಕ್ಯಾಚರ್, ಇಂಡಿಯನ್ ಟ್ರೀ ಪಿಪಿಟ್ ಮತ್ತು ಬ್ರೀಸ್ಟೇಡ್ ಪಿಪಿಟ್. ಇಷ್ಟೆ ಅಲ್ಲದೆ ಈ ಉದ್ಯಾನದಲ್ಲಿ 312 ಬಗೆಯ ಹೂವುಗಳು ಮತ್ತು ವೈವಿಧ್ಯಮಯ ಪ್ರಭೇದದ ಪಾತರ್ಗಿತ್ತಿಗಳನ್ನೂ ಸಹ ನೋಡಬಹುದಾಗಿದೆ.

Please Wait while comments are loading...