ಜೋಶಿಮಠದಿಂದ 12 ಕಿ.ಮೀ ದೂರದಲ್ಲಿರುವ ವಂಶಿನಾರಾಯಣ ಕಲ್ಪೇಶ್ವರ ಒಂದು ಮನಮೋಹಕಗೊಳಿಸುವಂತಹ ಕಣಿವೆ. ಈ ಕಣಿವೆಯಲ್ಲಿರುವ ಕಲ್ಪೇಶ್ವರ ಎಂಬ ಸುಂದರವಾದ ಗುಹೆಯಿಂದ ಇದು ಹೆಸರುವಾಸಿಯಾಗಿದೆ. ಈ ಗುಹೆಯು ಜಗತ್ತಿನಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ವಂಶಿನಾರಾಯಣ ಎಂಬ ಸ್ಥಳವು ಇಲ್ಲಿಂದ ಕೇವಲ10 ಕಿ.ಮೀ ದೂರದಲ್ಲಿದ್ದು, ತನ್ನ ಸುಂದರ ಪ್ರಾಕೃತಿಕ ಸೊಬಗಿನಿಂದಾಗಿ ಹೆಸರುವಾಸಿಯಾಗಿದ್ದು ಅನ್ವೇಷಿಸಲು ಯೋಗ್ಯವಾದ ಸ್ಥಳವಾಗಿದೆ.