ಹಿಮಾಚಲ ಪ್ರದೇಶದ ಕಂಗ್ರಾವನ್ನು ಆಳುತ್ತಿದ್ದ ರಾಜನ ಮಗಳು ಚಂದೀಗಢದ ಉತ್ತರದ ಹಥನೌರ್ ನ ರಾಜನ ಮಗನನ್ನು ಮದುವೆಯಾದಾಗ ಆಕೆಯ ಇಚ್ಛೆಯಂತೆ ಜಯಂತಿ ದೇವಿ ಮಂದಿರವನ್ನು ನಿರ್ಮಿಸಲಾಗಿತ್ತು. 550 ವರ್ಷ ಪುರಾತವಾಗಿರುವ ಮಂದಿರದಲ್ಲಿರುವ ಜಯಂತಿ ದೇವಿಯ ರಾಣಿಯ ಕುಲದೇವತೆಯಾಗಿದ್ದರು ಮತ್ತು ರಾಣಿ ಆಕೆಯ ಉತ್ಕಟ ಭಕ್ತೆಯಾಗಿದ್ದಳು.
ಮಂದಿರವಿಲ್ಲದ ಕಾರಣ ಮದುವೆಯ ಬಳಿಕ ತನಗೆ ದೇವಿಯ ಪೂಜೆ ಮಾಡಲು ಸಾಧ್ಯವಿಲ್ಲವೆಂದು ತಿಳಿದು ನೆರವಿಗಾಗಿ ದೇವಿಯನ್ನು ಪ್ರಾರ್ಥಿಸುತ್ತಾಳೆ. ಮದುವೆ ವೇಳೆ ಆಕೆಯನ್ನು ಸಾಗಿಸುತ್ತಿದ್ದ ಡೋಲಿ(ಪಲ್ಲಕಿ) ಮುಂದೆ ಸಾಗಲೇ ಇಲ್ಲವಂತೆ. ಈ ವೇಳೆ ದೇವಿಯ ಸಣ್ಣ ಮೂರ್ತಿಯನ್ನು ಪಲ್ಲಕಿಯಲ್ಲಿಟ್ಟ ಬಳಿಕ ಸಮಸ್ಯೆ ಬಗೆಹರಿಯಿತು.
ಇದೆಲ್ಲವನ್ನು ನೋಡಿದ ಹಥನೌರ್ ನ ರಾಜ ಚಂದೀಗಢ್ ನಿಂದ 15 ಕಿ.ಮೀ. ದೂರದಲ್ಲಿರುವ ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿ ಜಯಂತಿ ದೇವಿಯ ಮಂದಿರ ನಿರ್ಮಿಸಿದ. ಜಯಂತಿ ಮರ್ಜಿ ಅಥವಾ ಜಯಂತಿ ಪುರಾತತ್ವ ಮ್ಯೂಸಿಯಂ ಶಿವಾಲಿಕ್ ಬೆಟ್ಟದ ತಪ್ಪಲಿನಲ್ಲಿದೆ. ಜಯಂತಿ ರಾವ್ ಎನ್ನುವ ಋತುಮಾನದ ಹೊಳೆಯೊಂದು ದೇವಸ್ಥಾನದ ಪಕ್ಕದಲ್ಲೇ ಹರಿಯುತ್ತಿದ್ದು, ಸುಮಾರು ನೂರು ಮೆಟ್ಟಿಲುಗಳನ್ನು ಹತ್ತಿದ ಬಳಿಕ ಇದನ್ನು ನೋಡಬಹುದಾಗಿದೆ.


Click it and Unblock the Notifications